

ಕೊಪ್ಪಳ : ಎಲ್ಲರೂ ಹೇಳಿದ ಮಾತುಗಳನ್ನೇ ಹೇಳುವುದರಲ್ಲಿ ಅರ್ಥವಿಲ್ಲ. ಹಿರಿಯ ಕವಿಗಳ ಮಾರ್ಗದರ್ಶನ ಯುವಕವಿಗಳಿಗೆ ಅವಶ್ಯಕ ಮತ್ತು ಅವರು ಹೇಳಿದ ಮಾತುಗಳನ್ನು ಕಾವ್ಯ ರಚನೆಯಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಗಟ್ಟಿ ಕಾವ್ಯ ಸಾಧ್ಯ ಎಂದು ಯುವ ಕವಿ ಶಿವಪ್ರಸಾದ ಹಾದಿಮನಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ಕವಿಸಮಯ 28ನೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಸಮಾನ ಮನಸ್ಕರ ಬೆರೆಯುವ ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತ ಪಡಿಸಿದ ಅವರು ಮುಕ್ತವಾಗಿ ಕವನಗಳ ವಿಮರ್ಶೆಮಾಡಿ ನಾನು ಮಾಡುತ್ತಿರುವುದು ವಿಮರ್ಶೆ ಅಲ್ಲ ಅವಲೋಕನ ಎಂದು ಹೇಳಿ ಸರಳವಾಗಿ ಕವನಗಳ ಕುರಿತು ಮಾತನಾಡಿದರು. ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ 20 ಕವಿಗಳು ತಮ್ಮ ಕವನ ವಾಚನ ಮಾಡಿದರು.
ಎ.ಪಿ.ಅಂಗಡಿ- ಪಟಾಕಿ, ಡಾ.ಮಹಾಂತೇಶ ಮಲ್ಲನಗೌಡರ- ಹಾಡು ಬಾರೆಲೆ ಕೋಗಿಲೆ, ಪುಷ್ಪಲತಾ ಏಳುಬಾವಿ- ಪಾಪದ ಹೂಗಳು, ಸುಮತಿ- ಪ್ರೀತಿಗೆ ಶ್ರದ್ದಾಂಜಲಿ, ಭಾವಬಿಂಬ,ಶಾಂತಾದೇವಿ ಹಿರೇಮಠ-ಚುಟುಕುಗಳು, ಲಕ್ಷ್ಮೀ ನಾಯಕ್-ಪ್ರೀತಿ, ಶಿ.ಕಾ.ಬಡಿಗೇರ-ಸಹಬಾಳ್ಬೆ,ಜಡೆಯಪ್ಪ-ದೀಪಾವಳಿ, ನೀ ಬದುಕಬಲ್ಲೆ, ವಿಠ್ಠಪ್ಪ ಗೋರಂಟ್ಲಿ- ಬರಾಕೋಗ್ಬೆಡಮಾ, ಎಸ್.ಎಂ.ಕಂಬಾಳಿಮಠ-ಇದ್ರ ಹೇಳ್ರಿ, ನಟರಾಜ ಸವಡಿ- ನೆರೆಹಾವಳಿ, ಸಿರಾಜ್ ಬಿಸರಳ್ಳಿ- ಸಿಕ್ಕುಗಳು, ಪ್ರೋ.ಅಲ್ಲಮಪ್ರಭು ಬೆಟ್ಟದೂರು-ಕವಿತೆ ಚುಟುಕುಗಳು,ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್- ಕವಿತೆ, ಡಾ.ಮಾರ್ಕಂಡಯ್ಯ ಹಂದ್ರಾಳ -ಚುಟುಕು, ಭರತೇಶ್ -ಯಾರಿವಳು, ಶಿವಾನಂದ ಹೊದ್ಲೂರ-ಕನ್ನಡಾಂಭೆ, ತುಳಸಿಪ್ರಿಯ- ನೀರಜೆ ಚುಟುಕು, ತಿಪ್ಪೇಸ್ವಾಮಿ ಭೋದಾ- ಕಾಯಕ ದಾಸೋಹ, ವಾಗೀಶ ಪಾಟೀಲ್-ನೆನಪುಗಳು ಕವನಗಳನ್ನು ವಾಚನ ಮಾಡಿದರು. ಮಹಾಂತೇಶ ಮಲ್ಲನಗೌಡರ ಶಿವಪ್ರಸಾದ ಹಾದಿಮನಿ ಕುರಿತು ಮಾತನಾಡಿದರು. ಸಿರಾಜ್ ಬಿಸರಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.
ಕೊಪ್ಪಳ : ಜೀವನವನ್ನೇ ನರಕ ಮಾಡುತ್ತಿರುವ ,ಮನುಷ್ಯ ಮನುಷ್ಯರ ನಡುವೆ ಕಂದಕ ನಿರ್ಮಿಸಿ ಕೋಮುಸೌಹಾರ್ಧಕ್ಕೆ ದಕ್ಕೆ ತಂದು ಮಾರಣಹೋಮ ಮಾಡುತ್ತಿರುವವರಲ್ಲಿ ಮನುಷ್ಯ ಪ್ರೇಮ ಬೆಳೆಸಬೇಕು. ಇದು ಸಾಹಿತ್ಯದಿಂದ, ಕಾವ್ಯದಿಂದ ಸಾಧ್ಯ, ಸಾಹಿತಿಗಳು ಮನುಷ್ಯ ಪ್ರೇಮ ಬೆಳೆಸಬೇಕು ಎಂದು ಬಂಡಾಯ ಸಾಹಿತಿ ಗದಗಿನ ಎ.ಎಸ್.ಮಕಾನದಾರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೭ನೇ ಕವಿಸಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸೂಫಿ ಸಂತರು ನಡೆದಾಡಿದಂತಹ ಸ್ಥಳಗಳಲ್ಲಿ ಕೋಮುವಾದದ ಬೀಜ ಬಿತ್ತಿ ಕೋಮು ಗಲಭೆ ನಡೆಸಲಾಗುತ್ತಿದೆ. ಜಾತಿ,ಜನಾಂಗ.ಭಾಷೆಯ ಎಲ್ಲ ಕಟ್ಟು ಪಾಡುಗಳನ್ನು ಮೀರಿ ಮನುಷ್ಯತ್ವದೆಡೆಗೆ, ಸೌಹರ್ಧತೆಯೆಡೆಗೆ,ಸಾಮರಸ್ಯದೆಡೆಗೆ ಸಾಗಿದ ಸೂಫಿ ಸಂತರ ವಿಚಾರಗಳ ಪ್ರಚಾರವಾಗಬೇಕು. ಇದರಿಂದ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯ ಎಂದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ವಾಗೀಶ ಪಾಟೀಲ-ಕ್ರಾಂತಿ, ಬಸಪ್ಪ ಬಾರಕೇರ-ಆಧುನೀಕ ವಚನಗಳು, ಮಹಾಂತೇಶ ಮಲ್ಲನಗೌಡರ-ಕನ್ನಡ ಜ್ಯೋತಿ, ಮಹೇಶ ಬಳ್ಳಾರಿ-ಕಟ್ಟುತ್ತೇವೆ, ಶಿವಪ್ರಸಾದ ಹಾದಿಮನಿ-ಚುಟುಕು, ಎ.ಪಿ.ಅಂಗಡಿ-ಶಿಶುಗೀತೆ, ಜಡೆಯಪ್ಪ- ಗಲ್ಲ, ಹಂದಿಗಳು, ಎ.ಎಸ್.ಮಕಾನದಾರ - ಅಣ್ಣಪ್ಪನಿಗೊಂದು ಮನವಿ, ಸಿರಾಜ್ ಬಿಸರಳ್ಳಿ-ಕನ್ನಡತಿ, ಬಿ.ಎಸ್.ಪಾಟೀಲ್-ಮಧ್ಯಮರು, ಗೋವಿಂದರಾಜ್ ಸಿದ್ದಾಂತಿ -ದೇಶಭಕ್ತಿಗೀತೆ, ಶಾಂತಾದೇವಿ ಹಿರೇಮಠ- ರಾಜ್ಯೋತ್ಸವ ನಾಡಹಬ್ಬ,ಮಹೆಬೂಬ ಮಕಾನದಾರ- ಹನಿಗವನ, ವಿಠ್ಠಪ್ಪ ಗೋರಂಟ್ಲಿ- ಚುಟುಕುಗಳ ವಾಚನ ಮಾಡಿದರು. ಕವಿಗೋಷ್ಠಿಯ ನಂತರ ಎ.ಎಸ್.ಮಕಾನದಾರರ ಸಾಹಿತ್ಯ ಕುರಿತ ಸಂವಾದ ನಡೆಯಿತು. ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಎ.ಎಸ್.ಮಕಾನದಾರರ ವಿಶ್ವ ಭ್ರಾತೃತ್ವದ ಸೂಫಿ ದೂದಪೀರಾಂ ಕೃತಿಯ ಬಗ್ಗೆ ಮಾತನಾಡಿ ಸೂಪಿ ಸಂತರ ವಿಚಾರಗಳನ್ನು ತಿಳಿಸಿದರು. ಶಿವಪ್ರಸಾದ ಹಾದಿಮನಿ- ಎದೆ ಸುಡುವ ನೆನಪುಗಳು ಕವನ ಸಂಕಲನದ ಬಗ್ಗೆ, ಎ.ಪಿ.ಅಂಗಡಿ-ಮನುಷ್ಯ ಪ್ರೇಮ ಕದ ತೆರೆಯುವ ಹೊತ್ತಿಗೆ ಕುರಿತು ಮಾತನಾಡಿದರು., ಜಡೆಯಪ್ಪ ನಾವೇ ಅಲ್ಲವೇ ಕವನವನ್ನು ಉಲ್ಲೇಖಿಸಿ ಮಾತನಾಡಿದರು. ಎ.ಎಸ್.ಮಕಾನದಾರ ಕೊಪ್ಪಳ ಜಿಲ್ಲೆಯ ಸಾಹಿತಿಗಳು ತಮ್ಮ ಮೇಲೆ ಬೀರಿದ ಪ್ರಭಾವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.
ಕೊಪ್ಪಳ : ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯದಲ್ಲಿ ಹೊಸದೊಂದು ಪ್ರಯೋಗ ಮಾಡಲಾಯಿತು. ಸ್ಥಳದಲ್ಲಿಯೇ ಕವನ ರಚನೆ ಮಾಡುವಂತಹ ಅಶುಕವಿತೆ ರಚನೆ ಕಾರ್ಯಕ್ರಮ. ವಿವಿದ ವಿಷಯಗಳ ಬಗ್ಗೆ ಚೀಟಿಯಲ್ಲಿ ಬರೆದು ನಂತರ ಆಯಾ ಕವಿಗಳಿಗೆ ಹಂಚಲಾಯಿತು. ಚೀಟಿಯಲ್ಲಿ ಬಂದಂತಹ ವಿಷಯದ ಬಗ್ಗೆ ಕವನ ರಚಿಸಲು ಕವಿಗಳಿಗೆ ಸೂಚಿಸಲಾಯಿತು. ಸುಮಾರು ೨೦ ನಿಮಿಷ ಸಮಯಾವಕಾಶ ನೀಡಲಾಗಿತ್ತು. ಅತ್ಯುತ್ತಮ ಎನ್ನಬಹುದಾದಂತಹ ಕವನಗಳ ರಚನೆಯಾಯಿತು. ಈ ಪ್ರಯೋಗ ಎಲ್ಲ ಕವಿಗಳಿಗೂ ಖುಷಿ ನೀಡುವುದರ ಜೊತೆ ರಚಿತವಾದ ಕವನಗಳನ್ನು ವಿಮರ್ಶಕರಾಗಿದ್ದ ವಿ.ಬಿ.ರಡ್ಡೇರ್ ಬಹಳ ಮೆಚ್ಚಿಕೊಂಡು ವಿಮರ್ಶೆ ಮಾಡಿದರು.
ಸಾಹಿತ್ಯ ಯಾವತ್ತೂ ಜೀವನ ಪ್ರೀತಿ ಬೆಳೆಸುತ್ತದೆ, ಕವನದಲ್ಲಿ ಎಷ್ಟೇ ರೋಷ, ಆವೇಶ , ನಿರಾಸೆ ಇದ್ದರೂ ಕೊನೆಯಲ್ಲಿ ಬದುಕಿನ ಬಗ್ಗೆ ಆಶಾಭಾವನೆ ಬಿತ್ತುವುದು ಕವಿತೆಯ ಜೀವನ ಪ್ರೀತಿಗೆ ಉದಾಹರಣೆ. ಹಲವಾರು ವಿಷಯಗಳ ಬಗ್ಗೆ ಕವನ ರಚಿಸಿದ ಕವಿಗಳು ತಮಗೆ ಕೊಟ್ಟಂತಹ ವಿಷಯದ ಬಗ್ಗೆ ಸಮರ್ಥವಾಗಿ ಕವನ ರಚಿಸಿದ್ದಾರೆ. ಕೆಲವು ಕವನಗಳಲ್ಲಿ ವಾಚ್ಯ ಎನಿಸುವಂತಹ ರಚನೆ ಇದ್ದರೂ ಸಹ ಸ್ಥಳದಲ್ಲಿಯೇ ಕವನ ರಚಿಸುವುದು ನಿಜಕ್ಕೂ ಪ್ರಶಂಸನೀಯ ಎಂದು ಕವನಗಳ ಕುರಿತು ಮಾತನಾಡಿದ ಸಾಹಿತಿ ವಿ.ಬಿ.ರಡ್ಡೇರ್ ಹೇಳಿದರು. ಕವಿಸಮಯದಲ್ಲಿ ಈ ರೀತಿಯ ಹೊಸ ಹೊಸ ಪ್ರಯೋಗಗಳು ನಡೆಯುತ್ತಿರಲಿ ಇದರಿಂದ ಬರೆಯುವವರಿಗೆ ಹೊಸ ಸ್ಪೂರ್ತಿ ಸಿಗುವಂತಾಗಲಿ ಎಂದು ಆಶಿಸಿದರು.
ಅಶುಕವಿತೆಯಲ್ಲಿ ಈ ಕೆಳಗಿನ ಕವಿಗಳು ಕವನ ವಾಚನ ಮಾಡಿದರು. ವೀರಣ್ಣ ಹುರಕಡ್ಲಿ- ಹುಟ್ಟು,ಸಾವು, ಜಿ.ಎಸ್.ಬಾರಕೇರ- ರಾಜಕೀಯ, ಗಂಗಾಧರ ಖಾನಾಪೂರ- ಜಿಲ್ಲಾ ಸಮಸ್ಯೆ,ನನ್ನದಲ್ಲ ತಪ್ಪು, ಎ.ಪಿ.ಅಂಗಡಿ- ಪ್ರೇಮ, ಮಹೇಶ ಬಳ್ಳಾರಿ - ನಗರ ಸಮಸ್ಯೆ, ಅಲಿ ನವಾಜ್ - ಸಮಕಾಲೀನ ಸಮಸ್ಯೆ, ಶಿವಪ್ರಸಾದ ಹಾದಿಮನಿ- ಬಡತನದ ಬದುಕು, ಶ್ರೀನಿವಾಸ ಚಿತ್ರಗಾರ- ಗರಿಕೆ ನಿಸರ್ಗ, ಮೆಹಮುದಮಿಯ- ಹಸಿರು ನಿಸರ್ಗ, ರಂಗನಾಥ- ದಲಿತರು, ಡಾ.ಮಹಾಂತೇಶ ಮಲ್ಲನಗೌಡರ- ಅಸ್ಪೃಶ್ಯರು, ಲಕ್ಷ್ಮೀ -ದೇಶಾಭಿಮಾನ, ಶಾಂತಾದೇವಿ ಹಿರೇಮಠ- ನೆನಪು, ಪುಷ್ಪಲತಾ ಏಳುಬಾವಿ- ಬಂಡಾಯ, ಸಿರಾಜ್ ಬಿಸರಳ್ಳಿ- ನಾಡು ನುಡಿ, ಹನುಮಪ್ಪ ಬಾರಕೇರ-ಸ್ತ್ರೀ, ಬಿ.ಸಿ.ಪಾಟೀಲ- ಎತ್ತಿಕೊಳ್ಳಿರಿ ಹೂವ ಎಂಬ ಕವಿತೆಗಳನ್ನು ವಾಚಿಸಿದರು.
ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು. ಮುಂದಿನ ವಾರ ಎ.ಪಿ.ಅಂಗಡಿಯವರ ಮಗ್ಗಿಮಾಮನ ಹಾಡುಗಳು ಕುರಿತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕವಿಸಮಯದಲ್ಲಿ ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ ಮತ್ತಿತರರು ಉಪಸ್ಥಿತರಿದ್ದರು.
ಕೊಪ್ಪಳ ಜಿಲ್ಲೆಯ ಖ್ಯಾತ ಕವಿ ಡಾ.ಮಹಾಂತೇಶ ಮಲ್ಲನಗೌಡರಿಗೆ ಅಕಾಡೆಮಿ ಆಪ್ ಬೆಂಗಾಲಿ ಪೋಯಟ್ರಿ, ಕಲ್ಕತ್ತಾ ಇವರು ಆಚಾರ್ಯ ಪ್ರಫುಲ್ಲಾ ಚಂದ್ರರಾಯ್ ಸ್ಮಾರಕ ಸಮ್ಮಾನ -೨೦೧೦ ಪ್ರಶಸ್ತಿಯನ್ನು ನೀಡಿದೆ. ಇದಕ್ಕಾಗಿ ಕವಿಸಮೂಹದ ಎಲ್ಲ ಕವಿಗಳು ಮಹಾಂತೇಶ ಮಲ್ಲನಗೌಡರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಕವಿಗೋಷ್ಠಿಯಲ್ಲಿ ವಾಚಿಸಿದ ಕವನಗಳು : ಬಸವರಾಜ ಮಾರನಬಸರಿ ಗಜೇಂದ್ರಗಡ- ಬನ್ನಿ ಭಾರತೀಯರೇ, ಬಸವರಾಜ ಸೂಳಿಬಾವಿ- ಎರಡು ಕವಿತೆಗಳು, ಮಹೇಶ ಬಳ್ಳಾರಿ- ಬದುಕು, ಪುಷ್ಪಲತಾ ಏಳುಬಾವಿ- ಏನೆಂದು ಬರೆಯಲಿ, ಮಹಾಂತೇಶ ಮಲ್ಲನಗೌಡರ- ಹೆಣ್ಣಿನ ಸ್ವಗತ, ಸಿರಾಜ್ ಬಿಸರಳ್ಳಿ - ಗಾಡಬಣ್ಣಗಳು, ಶಿವಪ್ರಸಾದ ಹಾದಿಮನಿ- ಬುದ್ದಿಜೀವಿಗಳೇ ಹೀಗೆ, ಶಿ.ಕಾ.ಬಡಿಗೇರ- ಬೆಳಕು ನೋಡದವರು, ಹನುಮಂತಪ್ಪ ಬಾರಕೇರ- ಹಕ್ಕಿ, ಎನ್.ಜಡೆಯಪ್ಪ- ಆಧುನಿಕ ವಚನ, ಆಲಿ ನವಾಜ್ : ನಾನೊಬ್ಬ ಬಾಲಕಾರ್ಮಿಕ, ವೀರಣ್ಣ ಹುರಕಡ್ಲಿ- ಅತ್ತೆ ಮನೆಗೆ ಅಳಿಯ ಬಂದಾಗ, ಎ.ಪಿ.ಅಂಗಡಿ- ಬಸ್ಸಿನಲ್ಲಿ ಹೆರಿಗೆ ಕವನಗಳನ್ನು ವಾಚಿಸಿದರು. ಜಡೆಯಪ್ಪ ಕಾರ್ಯಕ್ರಮ ನಡೆಸಿಕೊಟ್ಟರು. ಶಿ.ಕಾ.ಬಡಿಗೇರ ಸ್ವಾಗತಿಸಿದರು. ಸಿರಾಜ್ ಬಿಸರಳ್ಳಿ ವಂದನಾರ್ಪಣೆ ಮಾಡಿದರು
ಕೊಪ್ಪಳ : ಬದುಕಿನ ಅನುಭವ,ಅರಿವು,ಪರಿಸರ ,ಪ್ರಕೃತಿಯೆಡೆಗಿನ ಪ್ರಜ್ಞೆಯೇ ಸಾಹಿತ್ಯಕ್ಕೆ ಕಾರಣವಾಗುತ್ತದೆ ಎಂದು ಕವಿ ಅಕ್ಬರ್ ಕಾಲಿಮಿರ್ಚಿ ಹೇಳಿದರು. ಅವರು ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್ಯಕ್ರಮದಲ್ಲಿ ಕವಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಸಾಹಿತಿಗಳಿಗೆ ಕಳಂಕವಿದೆಯೇ ಹೊರತು ಸಾಹಿತ್ಯಕ್ಕೆ ಯಾವತ್ತೂ ಕಳಂಕವಿಲ್ಲ. ಬದುಕಿಗೆ ದಾರಿ ದೀಪವಾಗುವ ಕಾವ್ಯ ರಚನೆಯಾಗಬೇಕು ಎಂದರು. ಕವಿಸಮಯದಲ್ಲಿ ಭಾಗವಹಿಸಿದ್ದ ಕವಿಗಳ ದಂಡನ್ನು ಕಂಡು ಹರ್ಷ ವ್ಯಕ್ತಪಡಿಸಿದ ಕಾಲಿಮಿರ್ಚಿ ೨೮ ಕವಿಗಳು ಇಂದು ಕವನ ವಾಚನ ಮಾಡಿದ್ದಾರೆ. ಎಲ್ಲಾ ಕವಿಗಳನ್ನು ನೋಡುವ ಭಾಗ್ಯ ನೀಡಿದ ಕವಿಸಮಯ ನಿಜವಾಗಿಯೂ ಕವಿದರ್ಶನ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.
ಇಂದಿನ ಕವಿಸಮಯ ಕಾರ್ಯಕ್ರಮದಲ್ಲಿ ದಾಖಲೆ ಸಂಖ್ಯೆಯಲ್ಲಿ ಕವಿಗಳು ಮತ್ತು ಆಸಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. ೨೮ ಕವಿಗಳು ತಮ್ಮ ಕವನ ವಾಚನ ಮಾಡಿದರು. ಪ್ರತಿಕವಿಯೂ ತಮ್ಮ ಕವಿತೆಯ ಹುಟ್ಟಿನ ಬಗ್ಗೆ ಹೇಳಿ ತಮ್ಮ ಕವನ ವಾಚನ ಮಾಡಿದರು. ಶಾಂತಾದೇವಿ ಹಿರೇಮಠ-ಮರಕೋತಿಯಾಟ,ವಿಮಲಾ ಇನಾಂದಾರ ಅಳವಂಡಿ- ಪ್ರತಿಭಟನೆ, ವಾಗೀಶ ಪಾಟೀಲ್- ಮೌನ್, ಶಿ.ಕಾ.ಬಡಿಗೇರ- ಚುಟುಕುಗಳು, ಮಹಾಂತೇಶ ಮಲ್ಲನಗೌಡರ -ನಾಕ ನರಕ, ಅಕ್ಬರ್ ಕಾಲಿಮಿರ್ಚಿ- ಸೂರ್ಯನಿಗೆ, ಎ.ಪಿ.ಅಂಗಡಿ-ಇರಬೇಕು, ವಿರೇಶ ಹುಲ್ಲೂರ- ಪ್ರಕೃತಿಯ ಮುದ್ದಿನ ಕೂಸು, ಹನ್ಮಂತಪ್ಪ ಬಾರಕೇರ- ಅಮ್ಮ, ಜಿ.ಎಸ್.ಬಾರಕೇರ- ಹೆಂಡತಿ ತವರಿಗೆ ಹೋದಾಗ, ಜಡೆಯಪ್ಪ ಎನ್.-ನಾವೇ ಇಲ್ಲದ ನೆಲದಲ್ಲಿ, ವೀರಣ್ಣ ಹುರಕಡ್ಲಿ-ಸುತ್ತೋಣ ಬಾರಾ, ಶ್ರೀನಿವಾಸ ಚಿತ್ರಗಾರ- ಚುಟುಕುಗಳು, ಶಿವಪ್ಪ ಶೆಟ್ಟರ್- ದೇಶಭಕ್ತಿಗೀತೆ, ಮಹೇಶ್ ಬಳ್ಳಾರಿ- ಆಕ್ಟೋಪಸ್, ಲಕ್ಷ್ಮೀ- ಪ್ರಕೃತಿ ಇಲ್ಲದಿದ್ದರೆ, ಆರ್.ಎಂ.ಪಾಟೀಲ್- ಸಿದ್ದ, ಪುಷ್ಪಲತಾ ಏಳುಬಾವಿ- ಆಧುನಿಕ ವಚನಗಳು, ಅಲಿನವಾಜ್-ಶಾಯರಿ, ಶಿವಪ್ರಸಾದ ಹಾದಿಮನಿ-ನಾವೆಂಥ ಜನ, ಎಂ.ಡಿ.ಹುಸೇನ್ - ಸ್ಪೋಟ, ರಂಗನಾಥ ಕೋಳೂರು- ಕರ್ನಾಟಕ ಮಾತೆ, ವೀರಣ್ಣ ರಡ್ಡೇರ- ಟಿ.ಎನ್.ಶೇಷನ್, ಸಾಧನೆಯ ಕೊರತೆ, ಮಾನಪ್ಪ ಬೆಲ್ಲದ- ಧರೆಯ ಸೇಡು, ಶಾಂತೇಶ ಬಡಿಗೇರ- ಗವಿಸಿದ್ದೇಶ್ವರ, ಆಧುನಿಕ ಮನು, ಅರುಣಾ ನರೇಂದ್ರ-ಸುರಿಸದಿರು ಗೆಳತಿ, ಸಿರಾಜ್ ಬಿಸರಳ್ಳಿ -ನಾವು ಬದುಕುವುದೇ ಹೀಗೆ - ಕವನಗಳನ್ನು ವಾಚನ ಮಾಡಿದರು.
ಕವನವಾಚನದ ನಂತರ ಹಿರಿಯ ಕವಿಯತ್ರಿ ಶ್ರೀಮತಿ ಶಾಂತಾದೇವಿ ಹಿರೇಮಠರ ಕವನ ಸಂಕಲನಗಳ ಬಗ್ಗೆ ಸಂವಾದ , ಚರ್ಚೆ, ವಿಮರ್ಶೆ ಹಮ್ಮಿಕೊಳ್ಳಲಾಗಿತ್ತು. ಕವನಗಳ ಬಗ್ಗೆ ಮಾತನಾಡಿದ ಶಿವಪ್ರಸಾದ ಹಾದಿಮನಿ ದಂಪತಿಗಳಿಬ್ಬರು ಸೇರಿ ಸೃಷ್ಟಿಸಿದ ಕವನ ಸಂಕಲನ ನೀನೇ ನಾನು ನಾನೇ ನೀನು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಹಾದಿಯನ್ನೇ ಸೃಷ್ಟಿಸಿತು ಎಂದರು. ಪುಷ್ಪಲತಾ ಏಳುಬಾವಿ, ಮಹೇಶ ಬಳ್ಳಾರಿ, ವಿರೇಶ ಹುಲ್ಲೂರ, ಶ್ರೀನಿವಾಸ ಚಿತ್ರಗಾರ, ಜಿ.ಎಸ್ ಬಾರಕೇರ,ರಂಗನಾಥ ಮತ್ತು ಮಹಾಂತೇಶ ಮಲ್ಲನಗೌಡರ , ವಿ.ಬಿ.ರಡ್ಡೇರ ಕೃತಿಗಳ ಕುರಿತು ಮಾತನಾಡಿದರು. ಬರೆಯುವ ಮಹಿಳೆಯೇ ಒಂದು ಕ್ರಾಂತಿ, ಹೆಣ್ಣಿನ ಶೋಷಣೆಯ ಬಗ್ಗೆ ಚೆನ್ನಾಗಿ ಬರೆದಿದ್ದಾರೆ ಎಂದು ವಿ.ಬಿ.ರಡ್ಡೇರ,ಮಹಾಂತೇಶ ಮಲ್ಲನಗೌಡರ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಕವಿಯತ್ರಿ ಶಾಂತಾದೇವಿ ಹಿರೇಮಠ ತಮ್ಮ ಕೃತಿ ಬಗ್ಗೆ ಮಾತನಾಡಿದ ಎಲ್ಲರಿಗೆ ಧನ್ಯವಾದ ಅರ್ಪಿಸಿದರು. ದಾಂಪತ್ಯ ಜೀವನದ ಕುರಿತ ಅವರ ಕವಿತೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.
ಅಂತರಂಗದ ಧ್ವನಿಯಿಲ್ಲದ ಕವನಗಳಿಗೆ ಒಣ ಆಡಂಭರದಿಂದ ಪ್ರಯೋಜನವಿಲ್ಲ ಎಂದು ಸಾಹಿತಿ,ವಿಮರ್ಶಕ ಡಾ.ವಿ.ಬಿ.ರಡ್ಡೇರ ಹೇಳಿದರು. ಅವರು ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್ಯಕ್ರಮದಲ್ಲಿ ಕವನಗಳ ವಿಶ್ಲೇಷಣೆ ಮಾಡುತ್ತ ಕವಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕವಿಯು ಎಲ್ಲ ಬಗೆಯ ಬೇಧಗಳನ್ನು ಹೊಡೆದೋಡಿಸಲು ನಿರಂತರ ಹೋರಾಟ ಮಾಡುತ್ತಲೇ ಇರುತ್ತಾನೆ ಈ ಹೋರಾಟ ಯಾವತ್ತೂ ಸಾಗಿಯೇ ಇರುತ್ತದೆ. ಕವಿಯು ಯಾವಾಗಲೂ ಅಂತರ್ಮುಖಿ ವ್ಯಕ್ತಿತ್ವ ಹೊಂದಿರುತ್ತಾನೆ. ತನ್ನ ಭಾವನೆಗಳಿಗೆ ರೂಪು ಕೊಡುವ ಕಲೆಗಾರಿಕೆಯಿಂದ ಮತ್ತು ಸತತ ಅಧ್ಯಯನದಿಂದ ಕಾವ್ಯ ಶಕ್ತಿಯುತವಾಗುತ್ತದೆ. ಸಮಾಜವನ್ನು ಜೊತೆಯಲ್ಲಿಟ್ಟುಕೊಂಡು ಹೋಗುವ ಕಾವ್ಯ,ಸಾಹಿತ್ಯ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು. ನಮ್ಮ ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ಭೋರ್ಗರೆದ ಭೂಮಿ . ಇಲ್ಲಿ ದಾಸ ಮತ್ತು ವಚನ ಸಾಹಿತ್ಯ ವಿಫುಲವಾಗಿ ರಚಿತಗೊಂಡಿವೆ. ಆದರೆ ಈಗ ನಮ್ಮ ಭಾಗದ ಕವಿ, ಸಾಹಿತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ವಿಷಾಧಿಸಿದರು. ಈ ಭಾಗದ ಸಾಹಿತ್ಯ ಕಾರ್ಯಕ್ರಮಗಳಿಗೆ, ಸಾಹಿತಿಗಳಿಗೆ ಕವಿಸಮೂಹದ ಈ ಕವಿಸಮಯ ಸೂಕ್ತ ವೇದಿಕೆಯಾಗಲಿ ಎಂದು ಹಾರೈಸಿದರು.
ಈ ವಾರದ ಕವಿಸಮಯದಲ್ಲಿ ೨೧ ಕವಿಗಳು ತಮ್ಮ ಕವನ ವಾಚನ ಮಾಡಿದರು. ಅರುಣಾ ನರೇಂದ್ರ-ಪುಟ್ಟನ ಊಟ, ಶಾಂತಾದೇವಿ ಹಿರೇಮಠ-ಬರ ವರ ಚುಟುಕು, ಪುಷ್ಪಾಲತಾ ಏಳುಭಾವಿ- ಮುತ್ತು ಬಂದಾವ ಕೇರಿಗೆ, ವಾಗೀಶ್ಪಾಟೀಲ್- ನೆನೆದು, ಶ್ರೀನಿವಾಸ ಚಿತ್ರಗಾರ- ಅವ್ವಿ, ಶಿವಪ್ರಸಾದ ಹಾದಿಮನಿ- ಆತ್ಮಹತ್ಯೆ, ಜಿ.ಎಸ್.ಬಾರಕೇರ-ಚೆಂದುಳ್ಳಿ ಚೆಲುವೆ, ಮಹಾಂತೇಶ ಮಲ್ಲನಗೌಡರ- ಹೈ.ಕ.ವಿಮೋಚನೆ, ಶಿ.ಕಾ.ಬಡಿಗೇರ-ಭಂಗಿಗಳ ಸ್ವಗತ, ವಿಠ್ಠಪ್ಪ ಗೋರಂಟ್ಲಿಇ- ಅಂದು ಗೋದ್ರಾದಲ್ಲಿ ಮೂಡಿದ ಸೂರ್ಯ, ವಿ.ಬಿ.ರಡ್ಡೇರ- ನಾಗರಿಕತೆ, ಎಂ.ಡಿ.ನಂಜುಂಡಸ್ವಾಮಿ, ರಂಗನಾಥ ಕೋಳೂರು-ಪ್ರತಿಭಟನೆ, ಜಡೆಯಪ್ಪ ಇಟಗಿ- ಪ್ರೇಮ ಪಟಾಕಿ, ಶರಣಪ್ಪ ಕೊಪ್ಪದ- ಸೂರ್ಯಕಾಂತಿ, ಮಹೇಶ ಬಳ್ಳಾರಿ- ಒಂದು ರಾಜಕೀಯ ಕವಿತೆ, ವಿರೇಶ ಹುಲ್ಲೂರ-ಪ್ರೀತಿ, ವೀರಣ್ಣ ಹುರಕಡ್ಲಿ- ಮನಸ್ಸು, ಬೆಳಕು, ಎಂ.ಡಿ.ಹುಸೇನ್- ಭ್ರಷ್ಟ ರಾಜಕಾರಣಿ, ಶಿವಾನಂದ ಹೊದ್ಲೂರ- ಸಂಪತ್ತು ಚುಟುಕು, ಬಿ.ಸಿ.ಪಾಟೀಲ- ಚುಟುಕು ಸತಿ, ಸಿರಾಜ್ ಬಿಸರಳ್ಳಿ- ಸಾವು ಎಂಬ ಕವನಗಳನ್ನು ವಾಚನ ಮಾಡಿದರು.
ಕಸಾಪದ ರಾಜಶೇಖರ್ ಅಂಗಡಿ ಸೇರಿದಂತೆ ಇತರ ಆಸಕ್ತರು ಭಾಗವಹಿಸಿದ್ದ ಕಾರ್ಯಕ್ರಮವನ್ನು ಕವಿಸಮೂಹದ ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು. ಜುಲೈ 24,2010
ಕೊಪ್ಪಳ : ಸಮಕಾಲೀನ ಸಮಾಜದ ವಿಕಾರಗಳ ನಡುವೆ ಸೃಜನಶೀಲ ಮನಸ್ಸುಗಳು ಒಂದುಗೂಡಿರುವುದು ಬಹುಮುಖ್ಯ. ಇದು ಆರೋಗ್ಯಪೂರ್ಣ ಬೆಳವಣಿಗೆ, ಸಾಮಾಜಿಕ ಬೆಳವಣಿಗೆಗೆ ಆಶಾದಾಯಕವಾದುದು ಎಂದು ಯುವಕವಿ ಪ್ರಮೋದ ತುರ್ವಿಹಾಳ ಹೇಳಿದರು ಅವರು ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕವಿಗಳು ಮನುಷ್ಯ ಪ್ರೀತಿಯ ಜೊತೆಗೆ ಜೀವಸಂಕುಲದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು,ಅಧ್ಯಯನದ ಶಿಸ್ತನ್ನು ರೂಡಿಸಿಕೊಳ್ಳಬೇಕು ಇದರಿಂದ ಹೊಸ ಶೈಲಿಯನ್ನು ರೂಡಿಸಿಕೊಳ್ಳಲು ಸಾಧ್ಯ. ಓದುಗರು ಕುತೂಹಲದಿಂದ ಕಾಯುವಂತಹ ರಚನೆ ಕವಿಗಳಿಂದ ಬರಬೇಕು ಎಂದರು. ಸಮಾಜ ಮತ್ತು ಲೇಖಕನ ನಡುವೆ ಅನುಸಂದಾನವೆರ್ಪಟ್ಟು ಒಳ್ಳೆಯ ವಿಚಾರಗಳು ಎಲ್ಲೆಡೆ ಹರಡಬೇಕು ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕವಿಸಮಯದಲ್ಲಿ ಪ್ರಸ್ತುತಪಡಿಸಲಾಗುತ್ತಿರುವ ಕವನಗಳ ಮಟ್ಟ ಏನೇ ಇರಲಿ ಬರೆಯಬೇಕು ಎನ್ನುವ ಕುತೂಹಲದ ಮನಸ್ಥಿತಿ ಇಟ್ಟುಕೊಂಡು ಬರೆಯುತ್ತಿರುವ ಕವಿಗಳಿಗೆ ಅಭಿನಂದನೆಗಳು ಎಂದರು.
ಈ ಸಲದ ಕವಿಸಮಯ ಮುಕ್ತ ಕವನಗಳದಾಗಿತ್ತು. ಲಕ್ಷ್ಮೀ ಓತಗೇರಿ -ಹೆಣ್ಣು, ಅಲಿನವಾಜ್-ರಾಜಕೀಯ, ಕರೆಂಟ್, ಪುಷ್ಪಲತಾ ಏಳುಬಾವಿ -ಚುಟುಕು, ಕೋಳೂರು ರಂಗನಾಥ-ಟಾಲ್ಸ್ಟಾಯ್ , ಪ್ರಮೋದ ತುರ್ವಿಹಾಳ- ಮಗುವಿಗೊಂದು,ಮಾನಪ್ಪ ಬೆಲ್ಲದ-ನೊಂದಮನ ಕೈಚಾಚಿದಾಗ, ಮಹೇಶ್ ಬಳ್ಳಾರಿ-ಕ್ಯಾಸ್ ಬ್ಲಾಂಕ್,ಜಡೆಯಪ್ಪ - ದಲಿತರು,ಶಿವಪ್ರಸಾದ ಹಾದಿಮನಿ-ಭಾವೈಕ್ಯತೆ,ವೀರಣ್ಣ ಹುರಕಡ್ಲಿ- ಮಾತು, ವಿಠ್ಠಪ್ಪ ಗೋರಂಟ್ಲಿ- ಕವನ, ಜಿ.ಎಸ್.ಬಾರಕೇರ- ತುಂಗಭದ್ರೆ,ಸಿರಾಜ್ ಬಿಸರಳ್ಳಿ- ದ್ವೇಷ ಕವನಗಳನ್ನು ವಾಚನ ಮಾಡಿದರು. ವೀರಕನ್ನಡಿಗ ಸಂಘದ ಶಿವಾನಂದ ಹೊದ್ಲೂರ, ಪತ್ರಕರ್ತ ಮಹೇಶ ಬಾಬು ಉಪಸ್ಥಿತರಿದ್ದರು. ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.