Friday, April 22, 2011

ಕಾವ್ಯದಲ್ಲಿ ಬದುಕಿನ ತುಡಿತ ಮುಖ್ಯವಾಗಿರಬೇಕು




ಕೊಪ್ಪಳ : ಕಾವ್ಯದಲ್ಲಿ ಭಾಷೆ ಮತ್ತು ಶಬ್ದಗಳನ್ನು ತಂತ್ರಗಾರಿಕೆಯಿಂದ ಬಳಸುವ ಅವಶ್ಯಕತೆಯಿದೆ.ಹೊಸ ಹೊಸ ತಂತ್ರದಿಂದ ಭಾಷೆ, ಶಬ್ದ ನಾವಿನ್ಯತೆ ಪಡೆಯುತ್ತವೆ. ಭಾವನೆಗಳಿಗೆ ಕಾವ್ಯದ ರೂಪ ಕೊಡುವಲ್ಲ್ಲಿ ಕೆಲವೊಮ್ಮೆ ಶಬ್ದಗಳೂ ಸೋಲುತ್ತವೆ. ಕಾವ್ಯದಲ್ಲಿ ಬದುಕಿನ ತುಡಿತ ಮುಖ್ಯವಾಗಿರಬೇಕು ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ೫೦ನೇ ಕವಿಸಮಯದಲ್ಲಿ ಭಾಗವಹಿಸಿ ಭಾನುಮತಿಯನ್ನು ಪಂಪ ಚಿತ್ರಿಸಿದ ಬಗೆ ಮತ್ತು ಇತರ ಕವಿಗಳು,ಲೇಖಕರು ನೋಡುವ ಬಗೆಯ ಕುರಿತು ಮಾತನಾಡಿದರು. ಪಂಪನು ಕರ್ಣ ಮತ್ತು ಭಾನುಮತಿಯರ ನಡುವಿನ ಪಗಡೆಯಾಟವನ್ನು ವರ್ಣಿಸುವ ರೀತಿ ಮತ್ತು ವೀಣಾ ಬನ್ನಂಜೆ ಅದನ್ನು ತಮ್ಮದೇ ರೀತಿಯಲ್ಲಿ ಅರ್ಥೈಸಿರುವ ವ್ಯತ್ಯಾಸ ಕುರಿತು ಮಾತನಾಡಿದರು. ಕವಿಸಮಯವು ಹೊಸ ಕವಿಗಳಿಗೆ ವೇದಿಕೆಯಾಗಿರುವುದು ಮತ್ತು ಎಲ್ಲ ಸಮಾನಮನಸ್ಕರು ಒಂದೆಡೆ ಕುಳಿತು ನಡೆಸುತ್ತಿರುವ ಈ ಕಾರ್‍ಯಕ್ರಮ ೫೦ನೇ ವಾರವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರು ಎಲ್ಲರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಅಲ್ಲಮಪ್ರಭು ಬೆಟ್ಟದೂರು-ಬಿಟ್ಟು ಬಿಡು,ಘೋಷಣೆಗಳು, ಅರುಣಾ ನರೇಂದ್ರ- ಆಧುನಿಕ ವಚನಗಳು, ಪುಷ್ಪಲತಾ ಏಳುಬಾವಿ- ಪಂಚೆ, ರಮೇಶ ಬನ್ನಿಕೊಪ್ಪ- ಭಾನುಮತಿ, ಯಶೋಧರೆಯ ಅಳಲು, ಶಿವಪ್ರಸಾದ ಹಾದಿಮನಿ- ಎರಡು ಹನಿಗವನಗಳು, ಗುರುರಾಜ ದೇಸಾಯಿ- ಮಹಿಮೆ, ಪರ್‍ಮಿಷನ್, ವಾಸುದೇವ ಕುಲಕರ್ಣಿ- ಜನ ಲೋಕಪಾಲ ಮಸೂದೆ, ಕನಕಪ್ಪ ತಳವಾರ- ಕಾಮಸ್ಪರ್ಶ, ಗಾದಿ, ಸಿರಾಜ್ ಬಿಸರಳ್ಳಿ -ಬಿಕ್ಕಳಿಕಜೆ, ಭೋಜರಾಜ ಸೊಪ್ಪಿಮಠ- ಭಂಗಿಗಳ ಸ್ವಗತ, ಮಹೇಶ ಬಳ್ಳಾರಿ- ಸಂದೇಶ, ಕರ್ತೃ, ಜಡೆಯಪ್ಪ ಎನ್- ಸೀಮಂತ, ಡಾ.ಮಹಾಂತೇಶ ಮಲ್ಲನಗೌಡರ- ಕರ್ನಾಟಕ ರತ್ನ, ವಿಠ್ಠಪ್ಪ ಗೋರಂಟ್ಲಿ- ಸುವರ್ಣ ಪ್ರಭೆ, ಎ.ಪಿ.ಅಂಗಡಿ-ತಾಯ ಮೊಗವ ಕುರಿತು, ಸುಮತಿ ಹಿರೇಮಠ -ಬಾವ ಬಿಂಗ, ಶಾಂತಾದೇವಿ ಹಿರೇಮಠ- ಜೀವನದ ನಾವೆ, ಗಾಯತ್ರಿ ಭಾವಿಕಟ್ಟಿ- ಹರಕೆ ತೀರಿಸುವ ಪರಿ, ದಯಾನಂದ ಸಾಳುಂಕೆ- ಗಣತಂತ್ರ ಕವನಗಳನ್ನು ವಾಚನ ಮಾಡಿದರು.
ಕನ್ನಡನೆಟ್.ಕಾಂ ಕವಿಸಮೂಹದ ೫೦ನೇ ಕವಿಸಮಯವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೊದಲಿಗೆ ಈ ಸಲದ ಕಸಾಪದ ದತ್ತಿನಿದಿ ಬಹುಮಾನಗಳನ್ನು ಪಡೆದ ಬಸವರಾಜ ಆಕಳವಾಡಿ ಮತ್ತು ಡಾ.ವಿ.ಬಿ.ರಡ್ಡೇರ್ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಕವಿಸಮಯದ ಸುವರ್ಣ ಸಂಭ್ರಮದ ಹಿನ್ನೆಲಯಲ್ಲಿ ಸಿಹಿ ಹಂಚಲಾಯಿತು. ಕವಿಸಮಯ ತನ್ನ ೫೦ನೇ ವಾರವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅದರ ಯಶಸ್ಸಿಗೆ ಕಾರಣರಾದ ಎಲ್ಲರನ್ನೂ ಸ್ಮರಿಸಿ ವಂದನೆಗಳನ್ನು ಸಲ್ಲಿಸಲಾಯಿತು. ಕಾರ್‍ಯಕ್ರಮದಲ್ಲಿ ಶಿವಾನಂದ ಹೊದ್ಲೂರ, ಬಸಪ್ಪ ಬಾರಕೇರ, ಈಶ್ವರ ಹತ್ತಿ, ಬಸವರಾಜ ಶೀಲವಂತರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಹೇಶ ಬಳ್ಳಾರಿ ವಂದಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಿರೂಪಿಸಿದರು.

೩೭೧ನೇ ಕಲಂ ಜಾರಿಯಾಗಲು ತೀವ್ರ ಹೋರಾಟ ಅಗತ್ಯ


ಕೊಪ್ಪಳ : ಹೈದ್ರಾಬಾದ್ ಕರ್ನಾಟಕಕ್ಕೆ ೩೭೧ನೇ ಕಲಂ ಅನ್ವಯ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಗೃಹಸಚಿವರು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಅವರು ಇಂದು ವಿಶೇಷ ಸ್ಥಾನಮಾನ ಕೇಳುತ್ತಿರುವವರು ತೆಲಂಗಾಣದಂತೆ ಮುಂದೊಂದು ದಿನ ಪ್ರತ್ಯೇಕ ರಾಜ್ಯ ಕೇಳಬಹುದು ಎಂದು ಅನುಮಾನಿಸುತ್ತಿದ್ದಾರೆ. ಪ್ರಧಾನಿಗಳಿಗೆ ಬೆಟ್ಟಿಯಾದ ಸರ್ವಪಕ್ಷ ನಿಯೋಗವು ಮನವರಿಕೆ ಮಾಡಲು ಪ್ರಯತ್ನಿಸಿದೆ. ಆದರೆ ಇದು ಜಾರಿಯಾಗಲು ತೀವ್ರತೆರನಾದ ಹೋರಾಟ ಅವಶ್ಯಕವಿದೆ ಎಂದು ಸಂಸದ ಶಿವರಾಮೇಗೌಡರು ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೪೯ನೇ ಕವಿಸಮಯದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ೩೭೧ನೇ ಕಲಂ ಜಾರಿಗೊಳಿಸಲು ಸಂಸದರು ತೀವ್ರವಾಗಿ ಪ್ರಯತ್ನಿಸಬೇಕು ಹೋರಾಟಕ್ಕೆ ಕವಿಸಮೂಹದ ಎಲ್ಲರ ಬೆಂಬಲ ಇದೆ ಎನ್ನುವ ಮಾತಿಗೆ ಪ್ರತಿಯಾಗಿ ಮಾತನಾಡಿದ ಸಂಸದರು- ಜನಜಾಗೃತಿ ಜಾಥಾದ ನಂತರ ಇದರ ಬಗ್ಗೆ ಹೆಚ್ಚಿನ ಹೋರಾಟಕ್ಕೆ ಎಲ್ಲರೂ ಸಿದ್ದರಾಗಬೇಕು ಎಂದರು. ಕವಿಸಮಯದಂತಹ ಕಾರ‍್ಯಕ್ರಮದಲ್ಲಿ ಈ ರೀತಿ ಎಲ್ಲರೂ ಸೇರಿ ಮನದಾಳದ ಭಾವನೆಗಳನ್ನು ಹಂಚಿಕೊಳ್ಳುತ್ತಿರುವುದು ಸಂತಸ ನೀಡುವ ವಿಷಯ. ಹಿರಿ ಕಿರಿಯರು ಎಲ್ಲರೂ ಭಾಗವಹಿಸಿ ಕಾರ‍್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
"ಸಮಾನತೆ" ಕವನ ಓದುವುದರ ಮೂಲಕ ಸಂಸದ ಶಿವರಾಮೇಗೌಡರು ಕವಿಗೋಷ್ಠಿಗೆ ಚಾಲನೆ ನೀಡಿದರು. ನಂತರ ಕವಿಗೋಷ್ಠಿಯಲ್ಲಿ ಮಹೇಶ ಬಳ್ಳಾರಿ -ನಿತ್ಯಾನಂದ, ಡಾ.ಮಹಾಂತೇಶ ಮಲ್ಲನಗೌಡರ- ಸೋಲು, ವಿಠ್ಠಪ್ಪ ಗೋರಂಟ್ಲಿ-ಅಣ್ಣಾ ಹಜಾರೆ, ಸಾವಿರದಣ್ಣ, ಶಾಂತಾದೇವಿ ಹಿರೇಮಠ-ಅಣ್ಣಾ ಹಜಾರೆ, ಸುಮತಿ ಹಿರೇಮಠ- ರಾಣಿ ಮಹಲಿನ ಕನಸುಗಳು, ಜಡೆಯಪ್ಪ ಎನ್- ರುಬಾಯಿಗಳು, ಶ್ರೀನಿವಾಸ ಚಿತ್ರಗಾರ- ಮನಕುಲ ಉದ್ದಾರಕ, ಶಿವಪ್ರಸಾದ ಹಾದಿಮನಿ-ಮಕ್ಕಳಿವರೇನಮ್ಮ, ಎ.ಪಿ.ಅಂಗಡಿ- ಆಡಿದೆವು ನಾವು ಕ್ರಿಕೆಟ್, ದಯಾನಂದ ಸಾಳುಂಕೆ- ಆಹ್ವಾನ, ನಿರಾಲಿ, ಅಲ್ಲಮಪ್ರಭು ಬೆಟ್ಟದೂರ-ತಾತನನ್ನು ಉದ್ದೇಶಿಸಿ, ಸಿರಾಜ್ ಬಿಸರಳ್ಳಿ-ಮತ್ತೊಮ್ಮೆ ತೇರು ಎಳೆಯೋಣ, ಪ್ರೇಮಾ - ಯಾವ ನೀತಿ, ಶಾಂತು ಬಡಿಗೇರ- ದಲಿತ ಬೆಳಕು, ಎಸ್.ಎಂ.ಕಂಬಾಳಿಮಠ- ೩೭೧, ಭಾರತಾಂಭೆ, ನಟರಾಜ ಸವಡಿ- ಗಾಳಿ ಸುಳಿಯಲಿ ಕವನಗಳನ್ನು ವಾಚನ ಮಾಡಿದರು. ಕಾರ‍್ಯಕ್ರಮದಲ್ಲಿ ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಶಿವಾನಂದ ಹೊದ್ಲೂರ, ಡಾ.ರೇಣುಕಾ ಕರಿಗಾರ, ಗಾಯಿತ್ರಿ ಭಾವಿಕಟ್ಟಿ ಇನ್ನಿತರರು ಭಾಗವಹಿಸಿದ್ದರು. ಕವಿಗೋಷ್ಠಿಯನ್ನುದ್ದೇಶಿಸಿ ದಯಾನಂದ ಸಾಳುಂಕೆಯವರು ಮಾತನಾಡಿದರು.
ಕವಿಗೋಷ್ಠಿಯ ನಂತರ ಕ್ರಾಂತಿ ಸೂರ್ಯನ ಕಂದೀಲು ಕವನ ಸಂಕಲನದ ವಿಮರ್ಶೆ ಮತ್ತು ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು. ಡಾ.ಮಹಾಂತೇಶ ಮಲ್ಲನಗೌಡರು - ಬಾಬು ಬಿಸರಳ್ಳಿಯವರ ಕವನಗಳು ಹೆಚ್ಚು ಪ್ರಿಯವಾಗಿವೆ ಎಂದರು. ವಿಠ್ಠಪ್ಪ ಗೋರಂಟ್ಲಿಯವರು- ನಟರ ಮಕ್ಕಳು ನಟರಾಗುವುದು ಮತ್ತು ರಾಜಕೀಯ ನಾಯಕರ ಮಕ್ಕಳು ರಾಜಕಾರಣಿಗಳಾಗುವುದು ನಮ್ಮ ಸಾಮಾಜಿಕ ಬದುಕಿನಲ್ಲಿ ಸಹಜ ಆದರೆ ಸಾಹಿತ್ಯದಲ್ಲಿ ಈ ರೀತಿ ಆಗುವುದು ಅಷ್ಟು ಸರಳವಲ್ಲ. ತಂದೆ ಮಗ ಒಟ್ಟಿಗೆ ಪ್ರಕಟಿಸಿರುವ ಕವನ ಸಂಕಲನ ಕನ್ನಡ ಸಾಹಿತ್ಯದಲ್ಲಿಯೇ ಅಪರೂಪದ್ದು. ಅಭಿಪ್ರಾಯ, ಭಾವನೆ ಮತ್ತು ವಿಚಾರಗಳಲ್ಲಿ ಬಾಬುಸಾಬ ಬಿಸರಳ್ಳಿ ಮತ್ತು ಸಿರಾಜ್ ಬಿಸರಳ್ಳಿಯವರ ನೆಲೆಗಟ್ಟು ಪ್ರತ್ಯೇಕವಾಗಿಯೇ ನಿಲ್ಲುತ್ತವೆ. ಬಾಬುಸಾಬ ಬಿಸರಳ್ಳಿಯವರು ತಮ್ಮ ಕಾಲಘಟ್ಟಕ್ಕೆ ರಚಿಸಿದ ಕವನಗಳನ್ನು ನಾವು ಗೌರವಿಸಬೇಕಾಗುತ್ತದೆ. ಸಿರಾಜ್ ಬಿಸರಳ್ಳಿ ಕವನಗಳು ನಿಗಿ ನಿಗಿ ಕೆಂಡದಂತಿವೆ ಎಂದರು.
ಅಲ್ಲಮಪ್ರಭು ಬೆಟ್ಟದೂರು - ಪರಂಪರೆ ಎನ್ನುವುದು ಮುಖ್ಯವಾದದ್ದು ಯಾಕೆಂದರೆ ಬಾಬುಸಾಬ ಬಿಸರಳ್ಳಿಯವರು ವೈಚಾರಿಕ ಪ್ರಜ್ಞೆ ಹೊಂದಿದ್ದರಿಂದ ಅದನ್ನು ನಾವು ಸಿರಾಜ್ ಬಿಸರಳ್ಳಿಯವರ ಕವನಗಳಲ್ಲಿ ಮುಂದುವರೆಯುವುದನ್ನು ಕಾಣುತ್ತೇವೆ. ಬಾಬುಸಾಬ ಬಿಸರಳ್ಳಿಯವರ ಮೇ ಒಂದು ಕವಿತೆ ಬಹಳ ಚೆನ್ನಾಗಿದೆ,ಅರ್ಥಪೂರ್ಣವಾಗಿದೆ. ಕಫನ್, ಎಡಬಲದ ಹಂಗಿನಲ್ಲಿ, ಮತ್ತೊಮ್ಮೆ ತೇರು ಎಳೆಯೋಣ ಕವನಗಳು ಹೊಸ ಅರ್ಥವನ್ನು ನೀಡುತ್ತವೆ. ಬಂಡಾಯದ ಧ್ವನಿ ಇವರ ಕವನಗಳಲ್ಲಿ ತೀವ್ರವಾಗಿ ಮೂಡಿಬಂದಿದೆ. ನನ್ನೂರ ಕೋಗಿಲೆಗಳು ಹಾಡುವುದಿಲ್ಲ ಬಹಳ ಅದ್ಭುತ ವಿಚಾರವನ್ನು ಸಂವಹನಗೊಳಿಸುವ ಶಕ್ತಿ ಇವರ ಕವನಗಳಲ್ಲಿದೆ.ತಂದೆ ಮಕ್ಕಳಿಬ್ಬರ ಆಶಯಗಳು ಒಂದೇ ರೀತಿಯಾಗಿವೆ. ಕಾಲಕ್ಕೆ ತಕ್ಕಂತೆ ಅಭಿವ್ಯಕ್ತಿಯ ರೀತಿ ಬೇರೆಯಾಗಿದೆ ಎಂದರು.
ಮಹಾಂತೇಶ ಕೊತಬಾಳ, ಸುಮತಿ ಹಿರೇಮಠ, ಡಾ.ಗಾಯಿತ್ರಿ ಭಾವಿಕಟ್ಟಿ,ಎನ್.ಜಡೆಯಪ್ಪ, ಶ್ರೀನಿವಾಸ ಚಿತ್ರಗಾರ, ಶಾಂತಾದೇವಿ ಹಿರೇಮಠ,ಶಿವಪ್ರಸಾದ ಹಾದಿಮನಿ, ಶಾಂತು,ಕಂಬಾಳಿಮಠ .ಡಾ.ರೇಣುಕಾ ಇನ್ನಿತರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸ್ವಾಗತವನ್ನು ಮಹೇಶ ಬಳ್ಳಾರಿ ಕೋರಿದರು. ಕಾರ‍್ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಎಚ್ಚರಿಸುವ ಕಾವ್ಯ ರಚನೆಯಾಗಬೇಕು


ಕೊಪ್ಪಳ : ಪ್ರಸ್ತುತ ದಿನಮಾನಗಳ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಎಚ್ಚರಿಸುವ ಕಾವ್ಯ ರಚನೆಯಾಗಬೇಕು. ಹತ್ತಾರು ಸಮಸ್ಯೆಗಳಲ್ಲಿ ಜನ ಇಂದು ತೊಳಲಾಡುತ್ತಿದ್ದಾರೆ. ಅವರಿಗೆ ದಾರಿದೀಪವಾಗುವ ಮತ್ತು ಜನ ಜಾಗೃತಿ ಮೂಡಿಸುವ ಕಾರ್‍ಯವಾಗಬೇಕು ಎಂದು ಕವಿ ರಾಘವೇಂದ್ರ ದಂಡಿನ್ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೪೮ನೇ ಕವಿಸಮಯದಲ್ಲಿ ಯುಗಾದಿ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕೊಪ್ಪಳದಲ್ಲಿ ಇಂದು ಎಲ್ಲ ತಲೆಮಾರಿನ ಕವಿಗಳು ಒಂದೇ ವೇದಿಕೆಯಲ್ಲಿ ಕಾಣಸಿಗುತ್ತಿದ್ದಾರೆ. ಹಿರಿಯರು ಯುವಕರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಮುಂದೊಂದು ದಿನ ಕೊಪ್ಪಳದ ಭರವಸೆಯ ಯುವಕವಿಗಳು ರಾಜ್ಯದ ಗಮನಸೆಳೆಯುವಂತಾಗಲಿ ಎಂದು ಹಾರೈಸಿದರು.
ಇದಕ್ಕೂ ಮೊದಲು ನಡೆದ ಯುಗಾದಿ ವಿಶೇಷ ಕವಿಗೋಷ್ಠಿಯಲ್ಲಿ ಮಹೇಶ ಬಳ್ಳಾರಿ ಮೂಕ ಸಾಕ್ಷಿ, ವೀರಣ್ಣ ಹುರಕಡ್ಲಿ- ಚಂದ್ರಮಾನ ಯುಗಾದಿ, ಪುಷ್ಪಲತಾ ಏಳುಬಾವಿ- ಮನ, ಪರಶುರಾಮಪ್ರಿಯ- ಹೃದಯವುಳ್ಳ, ಜನುಮದ ಜೋಡಿ, ವಿಠ್ಠಪ್ಪ ಗೋರಂಟ್ಲಿ- ಗೊತ್ತಾಗದಂತೆ ಬಂದು ಹೋದ ಯುಗಾದಿ, ಶ್ರೀನಿವಾಸ ಚಿತ್ರಗಾರ- ಯುಗಾದಿ ಚುಟುಕುಗಳು, ಶಿವಪ್ರಸಾದ ಹಾದಿಮನಿ-ಹಾಯ್ಕುಗಳು, ಸಿರಾಜ್ ಬಿಸರಳ್ಳಿ- ಚರಿತ್ರೆಯ ಪುಟಗಳು, ಡಾ.ಮಹಾಂತೇಶ ಮಲ್ಲನಗೌಡರ-ಯುಗಾದಿ ಗೇಯ ಗೀತೆ, ಶಾಂತೇಶ ಬಡಿಗೇರ- ರೈತರ ಕ್ರಾಂತಿಯ ಕಹಳೆ, ಡಾ.ಶಿವಕುಮಾರ ಮಾಲಿಪಾಟೀಲ- ದೈವ ಭಕ್ತ, ಎ.ಪಿ.ಅಂಗಡಿ- ವಸಂತೊಂದಿಗೆ ಚೈತ್ರ ಬಂದ, ರಾಘವೇಂದ್ರ ದಂಡಿನ- ಯುಗಾದಿ , ಕತ್ತೆ ಚೌಪದಿಗಳು, ಜಡೆಯಪ್ಪ ಎನ್- ಧೂಳು, ಉಲ್ಲಾಸ, ಪ್ರೊ.ಅಲ್ಲಮಪ್ರಭು ಬೆಟ್ಟದೂರು- ಚುಟುಕುಗಳು, ರಾಮಣ್ಣ ವೇಮಲಿ-ಅಕ್ಕ , ಚಿದಾನಂದ ಕೀರ್ತಿ- ಬೇಸರ , ಜ್ವಾಲಾಮುಖಿ ಕವನಗಳನ್ನು ವಾಚನ ಮಾಡಿದರು.
ಕವಿಗೋಷ್ಠಿಯ ನಂತರ ಇತ್ತೀಚೆಗೆ ಬಿಡುಗಡೆಯಾದ ಡಾ. ಶಿವಕುಮಾರ ಮಾಲಿಪಾಟೀಲರ ಪ್ರಥಮ ಕಿರಣ ಕವನ ಸಂಕಲನ ಕುರಿತು ವಿಮರ್ಶೆ ಮತ್ತು ಸಂವಾದ ನಡೆಯಿತು. ಅಲ್ಲಮಪ್ರಭು ಬೆಟ್ಟದೂರರು ಆಶಯ ಚೆನ್ನಾಗಿದೆ ಜೊತೆಗೆ ಅಭಿವ್ಯಕ್ತಿಯ ರೀತಿಯನ್ನು ಉತ್ತಮಪಡಿಸಿಕೊಳ್ಳುಬೇಕು ಎಂದು ಸಲಹೆ ನೀಡಿದರು. ಸಂವಾದದಲ್ಲಿ ಎನ್.ಜಡೆಯಪ್ಪ, ಮಹೇಶ ಬಳ್ಳಾರಿ, ಶಿವಪ್ರಸಾದ ಹಾದಿಮನಿ,ಶಾಂತೇಶ ಬಡಿಗೇರ, ಡಾ. ರೇಣುಕಾರ ಕರಿಗಾರ ಭಾಗವಹಿಸಿದ್ದರು. ವಿಠ್ಠಪ್ಪ ಗೋರಂಟ್ಲಿಯವರು ಆರಂಭಿಕ ಹಂತದಲ್ಲಿರುವ ಕವಿ ಇನ್ನೂ ಬೆಳೆಯಬೇಕು. ಆಯಾ ಹಂತದ ಕವಿಗಳು ಮತ್ತು ಓದುಗರನ್ನು ತಲುಪುತ್ತಾರೆ. ಅಧ್ಯಯನದಿಂದ ಇನ್ನೂ ಹೆಚ್ಚಿನ ಕಾವ್ಯ ಕೃಷಿ ಸಾಧ್ಯ. ಕಾವ್ಯದ ಚೌಕಟ್ಟಿನಲ್ಲಿ ಬರೆಯುವುದನ್ನು ರೂಡಿಸಿಕೊಳ್ಳಬೇಕು ಎಂದರು. ವಿಮರ್ಶೆಗೆ ಪ್ರತಿಯಾಗಿ ಮಾತನಾಡಿದ ಡಾ.ಶಿವಕುಮಾರ ಮಾಲಿಪಾಟೀಲ ಮುಕ್ತ ಮನಸ್ಸಿನಿಂದ ಎಲ್ಲರ ಸಲಹೆಗಳನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾವ್ಯ ರಚನೆಯತ್ತ ಗಮನ ಹರಿಸುವುದಾಗಿ ಹೇಳಿದರು.
ಕಾರ್‍ಯಕ್ರಮದಲ್ಲಿ ಡಾ.ಲಕ್ಷ್ಮೀಕಾಂತ ಅಂಟಾಳಮರದ, ಶಿವಾನಂದ ಹೊದ್ಲೂರ, ಲಕ್ಷ್ಮೀ, ಮಹಾಂತೇಶ ಕೊತಬಾಳ, ನವೀನ ರಾಠೋಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮಹೇಶ ಬಳ್ಳಾರಿ ಸ್ವಾಗತಿಸಿದರು ,ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

ಕವನಗಳಲ್ಲಿ ಹೊಸ ಪರಿಭಾಷೆ ಇರಲಿ- ಡಾ.ಜಾಜಿ ದೇವೇಂದ್ರಪ್ಪ


ಕೊಪ್ಪಳ : ಸಧ್ಯದ ಪರಿಸ್ಥಿತಿಯಲ್ಲಿ ಸಾಂಸ್ಕೃತಿಕ ಬದುಕು ಇಕ್ಕಟ್ಟಿನಲ್ಲಿದೆ. ಬರೆಯುವವರದೇ ಒಂದು ವರ್ಗ ಎನ್ನುವಂತಾಗಿದೆ. ಅವರು ಜನರಿಂದ ದೂರ ಸರಿಯುತ್ತಿದ್ದಾರೆ ಎನಿಸುತ್ತಿದೆ. ಕಾವ್ಯಕ್ಕೂ ಬದುಕಿಗೂ ಸಂಬಂಧವಿಲ್ಲದಂತೆ ನಡೆಯುತ್ತಿದೆ. ಬದುಕಿನೆಡೆಗೆ ಬದ್ದತೆ ಮಾಯವಾಗುತ್ತಿದೆ ಎಂದು ಸಂಶೋಧಕ, ವಿಮರ್ಶಕ, ಕವಿ ಡಾ.ಜಾಜಿ ದೇಂವೆಂದ್ರಪ್ಪ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ೪೪ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾವ್ಯ ಸಹಜವಾಗಿ ಬರಬೇಕು. ಕನಿಷ್ಠ ಕಾವ್ಯಗುಣಗಳು ಇರಬೇಕು. ಕವನಗಳಲ್ಲಿ ಹೊಸ ಪರಿಭಾಷೆ ಇರಬೇಕು. ಹಳೆಯದನ್ನು ಮತ್ತು ಹೊಸದನ್ನು ಓದುವ ಗುಣವನ್ನು ಕವಿಗಳು ಬೆಳಿಸಿಕೊಳ್ಳಬೇಕು ಹಾಗಾದಲ್ಲಿ ಕವಿ ಬೆಳೆಯುತ್ತಾನೆ ಎಂದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಡಾ.ಜಾಜಿ ದೇವೇಂದ್ರಪ್ಪ - ಟಿಕೋಲಾ, ಗಾಯತ್ರಿ ಭಾವಿಕಟ್ಟಿ- ನನ್ನದೊಂದು ದೂರು, ಪುಷ್ಪಲತಾ ಏಳುಬಾವಿ- ಬಾಳಿನ ಚುಕ್ಕಿ, ಡಾ. ರೇಣುಕಾ ಕರಿಗಾರ- ನಿನಗಾಗಿ ನಾನು , ವಿಪರ್‍ಯಾಸ, ಪ್ರೋ: ಅಲ್ಲಮಪ್ರಭು ಬೆಟ್ಟದೂರ- ಸಂಸ್ಕೃತ, ಜಡೆಯಪ್ಪ- ದೂಳು ಗೆದ್ದವರು, ಬರಬೇಡ, ಕರಿಸಿದ್ದನಗೌಡ- ಕಟ್ಟುವೆವು ನಾವು, ಶಿವಪ್ರಸಾದ ಹಾಧಿಮನಿ- ಬಂಡಾಯಕ್ಕೊಬ್ಬನೇ ಚಂಪಾ, ಕಾಮನೂರು ನಾಗೇಂದ್ರಪ್ರಸಾದ- ಶೀರ್ಷಿಕೆ ರಹಿತ ಕವಿತೆ, ಡಾ.ಮಹಾಂತೇಶ ಮಲ್ಲನಗೌಡರ -ಎಲ್ಲರೂ ಸಮಾನರು, ಶರಣಪ್ಪ ಬಾಚಲಾಪೂರ- ನನ್ನ ನಿನ್ನ ನಡುವೆ, ವೀರಣ್ಣ ಹುರಕಡ್ಲಿ- ಇವನೊಬ್ಬ ಸ್ನೇಹಿತ, ಮಹೇಶ ಬಳ್ಳಾರಿ - ಮೂಕನ ಮೊಬೈಲು ಮತ್ತು ಗುಬ್ಬಚ್ಚಿ, ಸಿರಾಜ್ ಬಿಸರಳ್ಳಿ- ನಮ್ಮವರು, ಶಾಂತೇಶ ಬಡಿಗೇರ- ಶೃತಿ, ಸುಮತಿ ಹಿರೇಮಠ- ಚರಿತ್ರೆಗೆ ನಾವು, ಮೆಹಮೂದಮಿಯಾ -ಪ್ರಯತ್ನಗಳು, ವಿಠ್ಠಪ್ಪ ಗೋರಂಟ್ಲಿ-ಶಬ್ದ ಸೂತಕ ಕವನಗಳನ್ನು ವಾಚನ ಮಾಡಿದರು.
ಬೆಳ್ಳಿ ಸಾಕ್ಷಿಗೆ ಜಿಲ್ಲಾ ಸಂಚಾಲಕರಾಗಿ ಆಯ್ಕೆಯಾಗಿರುವ ಮಹೇಶ ಬಳ್ಳಾರಿಯವರನ್ನು ಅಭಿನಂದಿಸಲಾಯಿತು. ಎಸ್.ಎಂ.ಕಂಬಾಳಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, April 18, 2011

ಧರ್ಮ,ರಾಜಕಾರಣ ವಿಭಜಿಸುತ್ತಿರುವಾಗ ಕಾವ್ಯ ನಮ್ಮನ್ನು ಒಂದು ಗೂಡಿಸುತ್ತದೆ-ಡಾ.ರಹಮತ್ ತರೀಕೆರೆ









ಧರ್ಮ -ರಾಜಕಾರಣ ನಮ್ಮನ್ನು ವಿಭಜಿಸುತ್ತಿರುವಾಗ ಕಾವ್ಯ ನಮ್ಮನ್ನು ಒಂದು ಗೂಡಿಸುತ್ತಿದ್ದೆ. ಕವಿಸಮಯದಲ್ಲಿ ಎಲ್ಲರೂ ಒಂದಾಗಿ ಕುಳಿತು ಕಟ್ಟುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದದ್ದು. ಇತ್ತೀಚಿನ ತಲೆಮಾರಿನ ಲೇಖಕರು,ಸಾಹಿತಿಗಳು ಹಿರಿಯರಿಗಿಂತ ಉತ್ತಮವಾದ ಸಾಹಿತ್ಯ ರಚನೆ ಮಾಡುತ್ತಿರುವುದು ಒಳ್ಳೆಯ ಸಂಗತಿ. ಕೊಪ್ಪಳ ನನ್ನ ಕರ್ಮಭೂಮಿಯಾಗಿ ನನ್ನನ್ನು ಬೆಳೆಸಿದೆ. ಇಲ್ಲಿಯ ಗೆಳೆಯರ ಬಳಗ ಯಾವಾಗ ಕರೆದರೂ ನಾನು ತಪ್ಪದೇ ಬರುತ್ತೇನೆ. ಈ ಸನ್ಮಾನಗಳು ನನ್ನ ಬಗ್ಗೆ ನಾನು ಪುನರ್ ವಿಮರ್ಶೆ ಮಾಡಿಕೊಳ್ಳುವಂತೆ ಮಾಡಿವೆ" ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ರಹಮತ್ ತರೀಕೆರೆ ಹೇಳಿದರು. ಅವರು ನಗರದ ಜಚನಿ ಜನ್ಮಶತಾಬ್ದಿ ಭವನದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ಪುಸ್ತಕಗಳ ಬಿಡುಗಡೆ ಹಾಗೂ ಸನ್ಮಾನ ಕಾರ್‍ಯಕ್ರಮದಲ್ಲಿ ಪುಸ್ತಕಗಳ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಕೊಪ್ಪಳದಲ್ಲಿ ಕವಿಗಳ ಸಂಖ್ಯೆ ಹೆಚ್ಚಿದೆ ಅದೇ ರೀತಿ ಸಂಶೋಧಕರು ಮತ್ತು ವಿಮರ್ಶಕರ ಸಂಖ್ಯೆ ಹೆಚ್ಚಾಗಲಿ.ಕವಿಸಮಯದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯಲಿ. ವಿಮರ್ಶೆ, ಸಾಹಿತ್ಯ ವಿಶ್ಲೇಷಣೆ ನಡೆಯಲಿ ಎಂದು ಹೇಳಿದರು.
ಕಾರ್‍ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಿರಾಜ್ ಬಿಸರಳ್ಳಿ ಕವಿಸಮಯ ನಡೆದುಬಂದ ದಾರಿ ಹಾಗೂ ಕಾರ್‍ಯಕ್ರಮದ ಕುರಿತು ಮಾತನಾಡಿದರು.ಉದ್ಘಾಟನಾ ಭಾಷಣ ಮಾಡಿದ ವಿಠ್ಠಪ್ಪ ಗೋರಂಟ್ಲಿಯವರು ಕವಿ ತನ್ನನ್ನು ತಾನು ವಿಮರ್ಶಿಸಿಕೊಳ್ಳುತ್ತ ತನ್ನ ಕವಿತೆಯಲ್ಲಿ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ತುಡಿಯಬೇಕಾಗುತ್ತದೆ. ಸಾಹಿತಿ ಸಾಯಬಹುದು ಆದರೆ ಸಾಹಿತ್ಯ ಸಾಯುವುದಿಲ್ಲ. ಸಿರಾಜ್ ಬಿಸರಳ್ಳಿ ತಮ್ಮ ತಂದೆ ದಿ.ಬಾಬುಸಾಬ ಬಿಸರಳ್ಳಿಯವರ ಆದರ್ಶದ ವಾರಸುದಾರ,ದಿ.ಬಾಬುಸಾಬ ಬಿಸರಳ್ಳಿಯವರ ಕಾವ್ಯ ಯಾವತ್ತೂ ಸ್ಮರಣೀಯವಾದದ್ದು ಎಂದರು.Justify Full
ಬಿಡುಗಡೆಗೊಂಡ ಪುಸ್ತಕಗಳ ಕುರಿತು ಮಾತನಾಡಿದ ಕವಿ, ವಿಮರ್ಶಕ ಪ್ರಮೋದ ತುರ್ವಿಹಾಳ" ಕ್ರಾಂತಿ ಸೂರ್ಯನ ಕಂದೀಲು ಕವನ ಸಂಕಲನದಲ್ಲಿ ಅಪ್ಪ-ಮಗನ ಕಾವ್ಯ ಜುಗಲ್ ಬಂದಿ ನಡೆದಿದೆ. ಅಪ್ಪ ಮತ್ತು ಮಗ ಸೇರಿ ಕವನ ಸಂಕಲನ ಹೊರತಂದಿರುವುದು ಕನ್ನಡ ಸಾಹಿತ್ಯದ ಮಟ್ಟಿಗೆ ಇದೊಂದು ದಾಖಲೆ. ದಿ.ಬಾಬುಸಾಬ ಬಿಸರಳ್ಳಿಯವರು ರಚಿಸಿರುವ ಅಪ್ಪ-ಅಮ್ಮ ಕವನ ,ಹರಾಜು ಕವನಗಳು ಮನುಷ್ಯ ಸಂಬಂಧವನ್ನು ಎತ್ತಿಹಿಡಿಯುತ್ತವೆ. ಸಿರಾಜ್ ಬಿಸರಳ್ಳಿ ತಮ್ಮ ತಂದೆ ದಿ.ಬಾಬುಸಾಬ ಬಿಸರಳ್ಳಿಯವರ ಜ್ಞಾನಪ್ರಜ್ಞೆಯ ವಾರಸುದಾರರಾಗಿ ಮುಂದುವರೆಯುತ್ತಿದ್ದಾರೆ. ಸಿರಾಜ್ ಬಿಸರಳ್ಳಿಯವರ ಕವನಗಳು ಬದುಕಿನ ದಟ್ಟ ಅನುಭವವನ್ನು ನೀಡುತ್ತವೆ. ಅದೇ ರೀತಿ ಕವಿಸಮೂಹದ ಕವಿಸಮಯ ಕವನಸಂಕಲನ ಸಹ ಉತ್ತಮ ಕವನಗಳನ್ನು ಹೊಂದಿದೆ. ಭರವಸೆ ಹುಟ್ಟಿಸುವಂತಹ ಕವಿಗಳು ಇದರಲ್ಲಿದ್ದಾರೆ" ಎಂದರು.
ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ.ಅಲ್ಲಮಪ್ರಭು ಬೆಟ್ಟದೂರ ಅನುಭವ ಎನ್ನುವ ಮೂಲದ್ರವ್ಯದ ಜೊತೆಗೆ ಅಧ್ಯಯನವೂ ಸೇರಿದಾಗ ಉತ್ತಮ ಕಾವ್ಯ ಸಾಧ್ಯ,ಕವಿಸಮಯಕ್ಕೆ ನಾನಾ ಅರ್ಥಗಳಿವೆ ಡಾ.ರಹಮತ್ ತರೀಕೆರೆಯವರಿಗೆ ನಮ್ಮೆಲ್ಲರ ಪರವಾಗಿ ಅಭಿನಂದನೆಗಳು ಎಂದರು. ವೇದಿಕೆಯ ಮೇಲೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಉಧ್ಯಮಿ ಶ್ರೀನಿವಾಸ ಗುಪ್ತಾ, ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಉಪಸ್ಥಿತರಿದ್ದರು.
ನಂತರ ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಬಿ.ಪೀರಬಾಷಾ ವಹಿಸಿಕೊಂಡಿದ್ದರು.ಕವಿಗೋಷ್ಠಿಯನ್ನು ಶಿವಪ್ರಸಾದ ಹಾದಿಮನಿ,ಅರುಣಾ ನರೇಂದ್ರ ಮಾಡಿದರು. ಸುಮಾರು ೪೫ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು. ಕಾರ್‍ಯಕ್ರಮದಲ್ಲಿ ವಿ.ಬಿ.ರಡ್ಡೇರ್,ಹೆಚ್.ಎಸ್.ಪಾಟೀಲ್, ಮುನಿಯಪ್ಪ ಹುಬ್ಬಳ್ಳಿ,ಬಿ.ಎಸ್.ಪಾಟೀಲ್, ವೀರಣ್ಣ ಹುರಕಡ್ಲಿ,ಎನ್.ಜಡೆಯಪ್ಪ, ಹನುಮಂತಪ್ಪ ಅಂಡಗಿ, ಶಾಂತಾದೇವಿ ಹಿರೇಮಠ, ಪ್ರಕಾಶ ಬಳ್ಳಾರಿ, ಆರ್.ಎಂ.ಪಾಟೀಲ್, ಬಸವರಾಜ್ ಆಕಳವಾಡಿ,ಶಿವಪ್ಪ ಶೆಟ್ಟರ್,ಮಂಜುನಾಥ ಗೊಂಡಬಾಳ,ಫಕೀರಪ್ಪ ವಜ್ರಭಂಡಿ ಸೇರಿದಂತೆ ಕವಿಸಮೂಹದ ಕವಿಗಳು, ಹಿರಿಯ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ಸ್ವಾಗತವನ್ನು ಮಹೇಶ ಬಳ್ಳಾರಿ,ಪ್ರಾರ್ಥನೆಯನ್ನು ಪ್ರಿಯಾಂಕ,ಪಲ್ಲವಿ ನಿರೂಪಣೆಯನ್ನು ಸುಮತಿ ಹಿರೇಮಠ ನಡೆಸಿಕೊಟ್ಟರು. ಪುಷ್ಪಲತಾ ಏಳುಬಾವಿ ವಂದನಾರ್ಪಣೆ ಮಾಡಿದರು.

ಸಮಕಾಲೀನ ಸಮಸ್ಯೆಗಳನ್ನು ಕಾವ್ಯವಾಗಿಸುವುದು ಸರಳ ಅಲ್ಲ- ಅಲ್ಲಮಪ್ರಭು ಬೆಟ್ಟದೂರ

ಕೊಪ್ಪಳ : ಜಾತಿ ಎನ್ನುವ ಕಟುವಾಸ್ತವ, ಕಹಿ ಸತ್ಯಗಳನ್ನು ಮೀರಿ ಬದುಕಲು ಸಂಪ್ರದಾಯ ಬಿಡುತ್ತಿಲ್ಲ, ಪ್ರೀತಿಗೆ ಅಡ್ಡ ಬರುತ್ತಲೇ ಇದೆ. ಸಮಕಾಲೀನ ಸಮಸ್ಯೆಗಳನ್ನು ಕಾವ್ಯವಾಗಿಸುವುದು ಕಷ್ಟದ ಕೆಲಸ ಆದರೂ ಕಾವ್ಯಾತ್ಮಕ ರಚನೆ ಬೇಕು ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹದ ೪೦ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ನಮ್ಮ ಸುತ್ತಮುತ್ತಲೂ ನಡೆಯುತ್ತಿರುವ ಘಟನೆಗಳಿಗೆ ಸ್ಪಂದಿಸುತ್ತ ಅದನ್ನು ಕಾವ್ಯದಲ್ಲಿ ಅಭಿವ್ಯಕ್ತಿಗೊಳಿಸಬೇಕು ಆದರೆ ಆ ಕಾವ್ಯವು ವಾಚ್ಯತೆಯನ್ನು ಮೀರಬೇಕು. ನಮ್ಮ ಜೀವನದಲ್ಲಿ ಮೌಢ್ಯತೆಯನ್ನು ತೊರೆದು ವೈಜ್ಞಾನಿಕ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಹೆಚ್.ಯಲಬುರ್ಗಾ-ಬಾ ಗೆಳೆಯ, ಶಾಂತಪ್ಪ ಬಡಿಗೇರ- ಚುಟುಕು, ವಾಗೀಶ ಪಾಟೀಲ- ವಡ್ಡರ ಹುಡುಗಿ, ಬಸವರಾಜ ಸಂಕನಗೌಡರ- ತಿರುಕರು, ಶಿವಪ್ರಸಾದ ಹಾದಿಮನಿ- ಅಕ್ರಮ ಗಣಿಗಾರಿಕೆ, ಡಾ.ಮಹಾಂತೇಶ ಮಲ್ಲನಗೌಡರ- ನೀನಿಲ್ಲದ ನಾನು, ಪುಷ್ಪಲತಾ ಏಳುಬಾವಿ- ಗೃಹಿಣಿ ಮತ್ತು ಇರುಳು, ಸಿರಾಜ್ ಬಿಸರಳ್ಳಿ-ಮಡೆಸ್ನಾನ, ಸುಮತಿ ಹಿರೇಮಠ- ಬೆನ್ನ ಹಿಂದಿನ ಹೆರಳು-೨ , ಅಲ್ಲಮಪ್ರಭು ಬೆಟ್ಟದೂರ- ಅಮೇರಿಕಾ ಕವನಗಳನ್ನು ವಾಚನ ಮಾಡಿದರು. ನಂತರ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ- ಕುಡಿ ಕಥೆಯನ್ನು ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ಶಿವನಗೌಡರ ಬೂದಗುಂಪಾ,ಕರಿಯಪ್ಪ ಬೂದಗುಂಪಾ, ಮಾಲತೇಶ, ಯಶವಂತ್ ಮೇತ್ರಿ, ವೀರಣ್ಣ ಹುರಕಡ್ಲಿ, ವಾಯ್ .ಬಿ.ಜೂಡಿ, ಜಿ.ಎಸ್.ಗೋನಾಳ, ಹನುಮಂತಪ್ಪ ಅಂಡಗಿ, ಮಹೇಶ ಬಳ್ಳಾರಿ ಇತರರು ಭಾಗವಹಿಸಿದ್ದರು. ಶಿವಪ್ರಸಾದ ಹಾದಿಮನಿ ಸ್ವಾಗತ ಕೋರಿದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Tuesday, April 5, 2011

ಕಾವ್ಯದ ಮೂಲಕ ಎಚ್ಚರಿಸುವ ಕೆಲಸವಾಗಬೇಕು

ಕೊಪ್ಪಳ : ಪ್ರಸ್ತುತ ದಿನಮಾನಗಳ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಎಚ್ಚರಿಸುವ ಕಾವ್ಯ ರಚನೆಯಾಗಬೇಕು. ಹತ್ತಾರು ಸಮಸ್ಯೆಗಳಲ್ಲಿ ಜನ ಇಂದು ತೊಳಲಾಡುತ್ತಿದ್ದಾರೆ. ಅವರಿಗೆ ದಾರಿದೀಪವಾಗುವ ಮತ್ತು ಜನ ಜಾಗೃತಿ ಮೂಡಿಸುವ ಕಾರ್‍ಯವಾಗಬೇಕು ಎಂದು ಕವಿ ರಾಘವೇಂದ್ರ ದಂಡಿನ್ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೪೮ನೇ ಕವಿಸಮಯದಲ್ಲಿ ಯುಗಾದಿ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕೊಪ್ಪಳದಲ್ಲಿ ಇಂದು ಎಲ್ಲ ತಲೆಮಾರಿನ ಕವಿಗಳು ಒಂದೇ ವೇದಿಕೆಯಲ್ಲಿ ಕಾಣಸಿಗುತ್ತಿದ್ದಾರೆ. ಹಿರಿಯರು ಯುವಕರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಮುಂದೊಂದು ದಿನ ಕೊಪ್ಪಳದ ಭರವಸೆಯ ಯುವಕವಿಗಳು ರಾಜ್ಯದ ಗಮನಸೆಳೆಯುವಂತಾಗಲಿ ಎಂದು ಹಾರೈಸಿದರು.
ಇದಕ್ಕೂ ಮೊದಲು ನಡೆದ ಯುಗಾದಿ ವಿಶೇಷ ಕವಿಗೋಷ್ಠಿಯಲ್ಲಿ ಮಹೇಶ ಬಳ್ಳಾರಿ ಮೂಕ ಸಾಕ್ಷಿ, ವೀರಣ್ಣ ಹುರಕಡ್ಲಿ- ಚಂದ್ರಮಾನ ಯುಗಾದಿ, ಪುಷ್ಪಲತಾ ಏಳುಬಾವಿ- ಮನ, ಪರಶುರಾಮಪ್ರಿಯ- ಹೃದಯವುಳ್ಳ, ಜನುಮದ ಜೋಡಿ, ವಿಠ್ಠಪ್ಪ ಗೋರಂಟ್ಲಿ- ಗೊತ್ತಾಗದಂತೆ ಬಂದು ಹೋದ ಯುಗಾದಿ, ಶ್ರೀನಿವಾಸ ಚಿತ್ರಗಾರ- ಯುಗಾದಿ ಚುಟುಕುಗಳು, ಶಿವಪ್ರಸಾದ ಹಾದಿಮನಿ-ಹಾಯ್ಕುಗಳು, ಸಿರಾಜ್ ಬಿಸರಳ್ಳಿ- ಚರಿತ್ರೆಯ ಪುಟಗಳು, ಡಾ.ಮಹಾಂತೇಶ ಮಲ್ಲನಗೌಡರ-ಯುಗಾದಿ ಗೇಯ ಗೀತೆ, ಶಾಂತೇಶ ಬಡಿಗೇರ- ರೈತರ ಕ್ರಾಂತಿಯ ಕಹಳೆ, ಡಾ.ಶಿವಕುಮಾರ ಮಾಲಿಪಾಟೀಲ- ದೈವ ಭಕ್ತ, ಎ.ಪಿ.ಅಂಗಡಿ- ವಸಂತೊಂದಿಗೆ ಚೈತ್ರ ಬಂದ, ರಾಘವೇಂದ್ರ ದಂಡಿನ- ಯುಗಾದಿ , ಕತ್ತೆ ಚೌಪದಿಗಳು, ಜಡೆಯಪ್ಪ ಎನ್- ಧೂಳು, ಉಲ್ಲಾಸ, ಪ್ರೊ.ಅಲ್ಲಮಪ್ರಭು ಬೆಟ್ಟದೂರು- ಚುಟುಕುಗಳು, ರಾಮಣ್ಣ ವೇಮಲಿ-ಅಕ್ಕ , ಚಿದಾನಂದ ಕೀರ್ತಿ- ಬೇಸರ , ಜ್ವಾಲಾಮುಖಿ ಕವನಗಳನ್ನು ವಾಚನ ಮಾಡಿದರು.
ಕವಿಗೋಷ್ಠಿಯ ನಂತರ ಇತ್ತೀಚೆಗೆ ಬಿಡುಗಡೆಯಾದ ಡಾ. ಶಿವಕುಮಾರ ಮಾಲಿಪಾಟೀಲರ ಪ್ರಥಮ ಕಿರಣ ಕವನ ಸಂಕಲನ ಕುರಿತು ವಿಮರ್ಶೆ ಮತ್ತು ಸಂವಾದ ನಡೆಯಿತು. ಅಲ್ಲಮಪ್ರಭು ಬೆಟ್ಟದೂರರು ಆಶಯ ಚೆನ್ನಾಗಿದೆ ಜೊತೆಗೆ ಅಭಿವ್ಯಕ್ತಿಯ ರೀತಿಯನ್ನು ಉತ್ತಮಪಡಿಸಿಕೊಳ್ಳುಬೇಕು ಎಂದು ಸಲಹೆ ನೀಡಿದರು. ಸಂವಾದದಲ್ಲಿ ಎನ್.ಜಡೆಯಪ್ಪ, ಮಹೇಶ ಬಳ್ಳಾರಿ, ಶಿವಪ್ರಸಾದ ಹಾದಿಮನಿ,ಶಾಂತೇಶ ಬಡಿಗೇರ, ಡಾ. ರೇಣುಕಾರ ಕರಿಗಾರ ಭಾಗವಹಿಸಿದ್ದರು. ವಿಠ್ಠಪ್ಪ ಗೋರಂಟ್ಲಿಯವರು ಆರಂಭಿಕ ಹಂತದಲ್ಲಿರುವ ಕವಿ ಇನ್ನೂ ಬೆಳೆಯಬೇಕು. ಆಯಾ ಹಂತದ ಕವಿಗಳು ಮತ್ತು ಓದುಗರನ್ನು ತಲುಪುತ್ತಾರೆ. ಅಧ್ಯಯನದಿಂದ ಇನ್ನೂ ಹೆಚ್ಚಿನ ಕಾವ್ಯ ಕೃಷಿ ಸಾಧ್ಯ. ಕಾವ್ಯದ ಚೌಕಟ್ಟಿನಲ್ಲಿ ಬರೆಯುವುದನ್ನು ರೂಡಿಸಿಕೊಳ್ಳಬೇಕು ಎಂದರು. ವಿಮರ್ಶೆಗೆ ಪ್ರತಿಯಾಗಿ ಮಾತನಾಡಿದ ಡಾ.ಶಿವಕುಮಾರ ಮಾಲಿಪಾಟೀಲ ಮುಕ್ತ ಮನಸ್ಸಿನಿಂದ ಎಲ್ಲರ ಸಲಹೆಗಳನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾವ್ಯ ರಚನೆಯತ್ತ ಗಮನ ಹರಿಸುವುದಾಗಿ ಹೇಳಿದರು.
ಕಾರ್‍ಯಕ್ರಮದಲ್ಲಿ ಡಾ.ಲಕ್ಷ್ಮೀಕಾಂತ ಅಂಟಾಳಮರದ, ಶಿವಾನಂದ ಹೊದ್ಲೂರ, ಲಕ್ಷ್ಮೀ, ಮಹಾಂತೇಶ ಕೊತಬಾಳ, ನವೀನ ರಾಠೋಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮಹೇಶ ಬಳ್ಳಾರಿ ಸ್ವಾಗತಿಸಿದರು ,ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.