Monday, April 18, 2011

ಸಮಕಾಲೀನ ಸಮಸ್ಯೆಗಳನ್ನು ಕಾವ್ಯವಾಗಿಸುವುದು ಸರಳ ಅಲ್ಲ- ಅಲ್ಲಮಪ್ರಭು ಬೆಟ್ಟದೂರ

ಕೊಪ್ಪಳ : ಜಾತಿ ಎನ್ನುವ ಕಟುವಾಸ್ತವ, ಕಹಿ ಸತ್ಯಗಳನ್ನು ಮೀರಿ ಬದುಕಲು ಸಂಪ್ರದಾಯ ಬಿಡುತ್ತಿಲ್ಲ, ಪ್ರೀತಿಗೆ ಅಡ್ಡ ಬರುತ್ತಲೇ ಇದೆ. ಸಮಕಾಲೀನ ಸಮಸ್ಯೆಗಳನ್ನು ಕಾವ್ಯವಾಗಿಸುವುದು ಕಷ್ಟದ ಕೆಲಸ ಆದರೂ ಕಾವ್ಯಾತ್ಮಕ ರಚನೆ ಬೇಕು ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹದ ೪೦ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ನಮ್ಮ ಸುತ್ತಮುತ್ತಲೂ ನಡೆಯುತ್ತಿರುವ ಘಟನೆಗಳಿಗೆ ಸ್ಪಂದಿಸುತ್ತ ಅದನ್ನು ಕಾವ್ಯದಲ್ಲಿ ಅಭಿವ್ಯಕ್ತಿಗೊಳಿಸಬೇಕು ಆದರೆ ಆ ಕಾವ್ಯವು ವಾಚ್ಯತೆಯನ್ನು ಮೀರಬೇಕು. ನಮ್ಮ ಜೀವನದಲ್ಲಿ ಮೌಢ್ಯತೆಯನ್ನು ತೊರೆದು ವೈಜ್ಞಾನಿಕ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಹೆಚ್.ಯಲಬುರ್ಗಾ-ಬಾ ಗೆಳೆಯ, ಶಾಂತಪ್ಪ ಬಡಿಗೇರ- ಚುಟುಕು, ವಾಗೀಶ ಪಾಟೀಲ- ವಡ್ಡರ ಹುಡುಗಿ, ಬಸವರಾಜ ಸಂಕನಗೌಡರ- ತಿರುಕರು, ಶಿವಪ್ರಸಾದ ಹಾದಿಮನಿ- ಅಕ್ರಮ ಗಣಿಗಾರಿಕೆ, ಡಾ.ಮಹಾಂತೇಶ ಮಲ್ಲನಗೌಡರ- ನೀನಿಲ್ಲದ ನಾನು, ಪುಷ್ಪಲತಾ ಏಳುಬಾವಿ- ಗೃಹಿಣಿ ಮತ್ತು ಇರುಳು, ಸಿರಾಜ್ ಬಿಸರಳ್ಳಿ-ಮಡೆಸ್ನಾನ, ಸುಮತಿ ಹಿರೇಮಠ- ಬೆನ್ನ ಹಿಂದಿನ ಹೆರಳು-೨ , ಅಲ್ಲಮಪ್ರಭು ಬೆಟ್ಟದೂರ- ಅಮೇರಿಕಾ ಕವನಗಳನ್ನು ವಾಚನ ಮಾಡಿದರು. ನಂತರ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ- ಕುಡಿ ಕಥೆಯನ್ನು ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ಶಿವನಗೌಡರ ಬೂದಗುಂಪಾ,ಕರಿಯಪ್ಪ ಬೂದಗುಂಪಾ, ಮಾಲತೇಶ, ಯಶವಂತ್ ಮೇತ್ರಿ, ವೀರಣ್ಣ ಹುರಕಡ್ಲಿ, ವಾಯ್ .ಬಿ.ಜೂಡಿ, ಜಿ.ಎಸ್.ಗೋನಾಳ, ಹನುಮಂತಪ್ಪ ಅಂಡಗಿ, ಮಹೇಶ ಬಳ್ಳಾರಿ ಇತರರು ಭಾಗವಹಿಸಿದ್ದರು. ಶಿವಪ್ರಸಾದ ಹಾದಿಮನಿ ಸ್ವಾಗತ ಕೋರಿದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Tuesday, April 5, 2011

ಕಾವ್ಯದ ಮೂಲಕ ಎಚ್ಚರಿಸುವ ಕೆಲಸವಾಗಬೇಕು

ಕೊಪ್ಪಳ : ಪ್ರಸ್ತುತ ದಿನಮಾನಗಳ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಎಚ್ಚರಿಸುವ ಕಾವ್ಯ ರಚನೆಯಾಗಬೇಕು. ಹತ್ತಾರು ಸಮಸ್ಯೆಗಳಲ್ಲಿ ಜನ ಇಂದು ತೊಳಲಾಡುತ್ತಿದ್ದಾರೆ. ಅವರಿಗೆ ದಾರಿದೀಪವಾಗುವ ಮತ್ತು ಜನ ಜಾಗೃತಿ ಮೂಡಿಸುವ ಕಾರ್‍ಯವಾಗಬೇಕು ಎಂದು ಕವಿ ರಾಘವೇಂದ್ರ ದಂಡಿನ್ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೪೮ನೇ ಕವಿಸಮಯದಲ್ಲಿ ಯುಗಾದಿ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕೊಪ್ಪಳದಲ್ಲಿ ಇಂದು ಎಲ್ಲ ತಲೆಮಾರಿನ ಕವಿಗಳು ಒಂದೇ ವೇದಿಕೆಯಲ್ಲಿ ಕಾಣಸಿಗುತ್ತಿದ್ದಾರೆ. ಹಿರಿಯರು ಯುವಕರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಮುಂದೊಂದು ದಿನ ಕೊಪ್ಪಳದ ಭರವಸೆಯ ಯುವಕವಿಗಳು ರಾಜ್ಯದ ಗಮನಸೆಳೆಯುವಂತಾಗಲಿ ಎಂದು ಹಾರೈಸಿದರು.
ಇದಕ್ಕೂ ಮೊದಲು ನಡೆದ ಯುಗಾದಿ ವಿಶೇಷ ಕವಿಗೋಷ್ಠಿಯಲ್ಲಿ ಮಹೇಶ ಬಳ್ಳಾರಿ ಮೂಕ ಸಾಕ್ಷಿ, ವೀರಣ್ಣ ಹುರಕಡ್ಲಿ- ಚಂದ್ರಮಾನ ಯುಗಾದಿ, ಪುಷ್ಪಲತಾ ಏಳುಬಾವಿ- ಮನ, ಪರಶುರಾಮಪ್ರಿಯ- ಹೃದಯವುಳ್ಳ, ಜನುಮದ ಜೋಡಿ, ವಿಠ್ಠಪ್ಪ ಗೋರಂಟ್ಲಿ- ಗೊತ್ತಾಗದಂತೆ ಬಂದು ಹೋದ ಯುಗಾದಿ, ಶ್ರೀನಿವಾಸ ಚಿತ್ರಗಾರ- ಯುಗಾದಿ ಚುಟುಕುಗಳು, ಶಿವಪ್ರಸಾದ ಹಾದಿಮನಿ-ಹಾಯ್ಕುಗಳು, ಸಿರಾಜ್ ಬಿಸರಳ್ಳಿ- ಚರಿತ್ರೆಯ ಪುಟಗಳು, ಡಾ.ಮಹಾಂತೇಶ ಮಲ್ಲನಗೌಡರ-ಯುಗಾದಿ ಗೇಯ ಗೀತೆ, ಶಾಂತೇಶ ಬಡಿಗೇರ- ರೈತರ ಕ್ರಾಂತಿಯ ಕಹಳೆ, ಡಾ.ಶಿವಕುಮಾರ ಮಾಲಿಪಾಟೀಲ- ದೈವ ಭಕ್ತ, ಎ.ಪಿ.ಅಂಗಡಿ- ವಸಂತೊಂದಿಗೆ ಚೈತ್ರ ಬಂದ, ರಾಘವೇಂದ್ರ ದಂಡಿನ- ಯುಗಾದಿ , ಕತ್ತೆ ಚೌಪದಿಗಳು, ಜಡೆಯಪ್ಪ ಎನ್- ಧೂಳು, ಉಲ್ಲಾಸ, ಪ್ರೊ.ಅಲ್ಲಮಪ್ರಭು ಬೆಟ್ಟದೂರು- ಚುಟುಕುಗಳು, ರಾಮಣ್ಣ ವೇಮಲಿ-ಅಕ್ಕ , ಚಿದಾನಂದ ಕೀರ್ತಿ- ಬೇಸರ , ಜ್ವಾಲಾಮುಖಿ ಕವನಗಳನ್ನು ವಾಚನ ಮಾಡಿದರು.
ಕವಿಗೋಷ್ಠಿಯ ನಂತರ ಇತ್ತೀಚೆಗೆ ಬಿಡುಗಡೆಯಾದ ಡಾ. ಶಿವಕುಮಾರ ಮಾಲಿಪಾಟೀಲರ ಪ್ರಥಮ ಕಿರಣ ಕವನ ಸಂಕಲನ ಕುರಿತು ವಿಮರ್ಶೆ ಮತ್ತು ಸಂವಾದ ನಡೆಯಿತು. ಅಲ್ಲಮಪ್ರಭು ಬೆಟ್ಟದೂರರು ಆಶಯ ಚೆನ್ನಾಗಿದೆ ಜೊತೆಗೆ ಅಭಿವ್ಯಕ್ತಿಯ ರೀತಿಯನ್ನು ಉತ್ತಮಪಡಿಸಿಕೊಳ್ಳುಬೇಕು ಎಂದು ಸಲಹೆ ನೀಡಿದರು. ಸಂವಾದದಲ್ಲಿ ಎನ್.ಜಡೆಯಪ್ಪ, ಮಹೇಶ ಬಳ್ಳಾರಿ, ಶಿವಪ್ರಸಾದ ಹಾದಿಮನಿ,ಶಾಂತೇಶ ಬಡಿಗೇರ, ಡಾ. ರೇಣುಕಾರ ಕರಿಗಾರ ಭಾಗವಹಿಸಿದ್ದರು. ವಿಠ್ಠಪ್ಪ ಗೋರಂಟ್ಲಿಯವರು ಆರಂಭಿಕ ಹಂತದಲ್ಲಿರುವ ಕವಿ ಇನ್ನೂ ಬೆಳೆಯಬೇಕು. ಆಯಾ ಹಂತದ ಕವಿಗಳು ಮತ್ತು ಓದುಗರನ್ನು ತಲುಪುತ್ತಾರೆ. ಅಧ್ಯಯನದಿಂದ ಇನ್ನೂ ಹೆಚ್ಚಿನ ಕಾವ್ಯ ಕೃಷಿ ಸಾಧ್ಯ. ಕಾವ್ಯದ ಚೌಕಟ್ಟಿನಲ್ಲಿ ಬರೆಯುವುದನ್ನು ರೂಡಿಸಿಕೊಳ್ಳಬೇಕು ಎಂದರು. ವಿಮರ್ಶೆಗೆ ಪ್ರತಿಯಾಗಿ ಮಾತನಾಡಿದ ಡಾ.ಶಿವಕುಮಾರ ಮಾಲಿಪಾಟೀಲ ಮುಕ್ತ ಮನಸ್ಸಿನಿಂದ ಎಲ್ಲರ ಸಲಹೆಗಳನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾವ್ಯ ರಚನೆಯತ್ತ ಗಮನ ಹರಿಸುವುದಾಗಿ ಹೇಳಿದರು.
ಕಾರ್‍ಯಕ್ರಮದಲ್ಲಿ ಡಾ.ಲಕ್ಷ್ಮೀಕಾಂತ ಅಂಟಾಳಮರದ, ಶಿವಾನಂದ ಹೊದ್ಲೂರ, ಲಕ್ಷ್ಮೀ, ಮಹಾಂತೇಶ ಕೊತಬಾಳ, ನವೀನ ರಾಠೋಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮಹೇಶ ಬಳ್ಳಾರಿ ಸ್ವಾಗತಿಸಿದರು ,ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Tuesday, February 15, 2011

ಭಾವನೆಗಳ ಸಶಕ್ತ ಅಭಿವ್ಯಕ್ತಿಗೆ ಅಧ್ಯಯನ ಅಗತ್ಯ


ಭಾವನೆಗಳು ಪ್ರತಿಯೊಬ್ಬರಲ್ಲಿಯೂ ಇರುತ್ತವೆ. ಅದು ಅಕ್ಷರ ರೂಪದಲ್ಲಿ ವ್ಯಕ್ತಪಡಿಸುವದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದಕ್ಕೆ ಸತತ ಅಧ್ಯಯನದ ಅಗತ್ಯವಿರುತ್ತದೆ ಎಂದು ಕತೆಗಾರ ಶರಣಪ್ಪ ಬಾಚಲಾಪೂರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೪೨ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಓದುವ ಹವ್ಯಾಸ ಬಹಳ ಕಡಿಮೆಯಾಗಿದೆ. ಮಾಧ್ಯಮಗಳು ಮೂಡನಂಬಿಕೆಯನ್ನು ಹೆಚ್ಚಿಸುತ್ತಿವೆ. ಇಂತಹ ಸಮಯದಲ್ಲಿ ಬರವಣಿಗೆಗೆ ನಿಜಕ್ಕೂ ಬೇಕಾಗಿರುವುದು ಉತ್ತಮ ಓದು. ಜನಪರವಾದ ತುಡಿತ ಸಾಹಿತ್ಯದಲ್ಲಿರಬೇಕು. ಪಿ.ಬಿ.ದುತ್ತರಗಿಯವರಂತಹ ಸಹವಾಸದಿಂದ ಸಾಹಿತ್ಯದ ಒಲುಮೆ ಹೆಚ್ಚಾಯಿತು. ಇತ್ತೀಚಿನ ದಿನಗಳಲ್ಲಿ ಒತ್ತಡಗಳ ನಡುವೆ ಬರವಣಿಗೆ ಕಡಿಮೆಯಾಗಿದೆ ಎಂದರು. ಇದಕ್ಕೂ ಮೊದಲು ಕಥಾವಾಚನವನ್ನು ಹಮ್ಮಿಕೊಳ್ಳಲಾಗಿತ್ತು. "ದಾಳಗಳು" ಕಥೆಯನ್ನು ಸಿರಾಜ್ ಬಿಸರಳ್ಳಿ ವಾಚನ ಮಾಡಿದರು. ನಂತರ ನಡೆದ ಕಾವ್ಯಗೋಷ್ಠಿಯಲ್ಲಿ ಮಹಾಂತೇಶ ಕೊತಬಾಳ- ಅವರು ಪಿಸುಗುಡುತ್ತಾರೆ, ಎನ್.ಜಡೆಯಪ್ಪ-ಶಾಸ್ತ್ರ, ಧೂಳು, ನಟರಾಜ ಸವಡಿ- ಆಹ್ವಾನ, ವಿರಹಗೀತೆ, ನಾಗೇಂದ್ರ ಪ್ರಸಾದ- ಗಾಯಗಳು, ಹನುಮಂತಪ್ಪ ಅಂಡಗಿ- ಒಲವೇ ನಮ್ಮ ಬದುಕು, ವಾಗೀಶ ಪಾಟೀಲ್- ಹಂಬಲ, ಡಾ.ರೇಣುಕಾ ಕರಿಗಾರ- ಹೂ ನಾನು - ದುಂಬಿ ನೀನು, ಮಹೇಶ ಬಳ್ಳಾರಿ- ನಿತ್ಯಾನಂದ, ಪುಷ್ಪಲತಾ ಏಳುಬಾವಿ- ಕೆಂಪು, ಮಲ್ಲಿಕಾರ್ಜುನ ಎಚ್.- ಒಲವಿನ ಓಲೆ, ಮೆಹಮೂದಮಿಯಾ- ದೇಶ ಪ್ರೇಮ ಕವನಗಳನ್ನು ವಾಚನ ಮಾಡಿದರು. ಹಿರಿಯ ಸಾಹಿತಿ ಜಿಲ್ಲೆಯ ಕತೆಗಾರರ ಕುರಿತು ಮಾತನಾಡಿದರು. ಕಾರ್‍ಯಕ್ರಮದಲ್ಲಿ ಡಾ.ಮಹಾಂತೇಶ ಮಲ್ಲನಗೌಡರ,ಶಿವಾನಂದ ಹೊದ್ಲೂರ, ತಿಪ್ಪೇಸ್ವಾಮಿ ಬೋದಾ, ಬಸವರಾಜ ಶೀಲವಂತರ, ರಾಕೇಶ ಮುಂತಾದವರು ಭಾಗವಹಿಸಿದ್ದರು. ಸ್ವಾಗತವನ್ನು ಮಹೇಶ ಬಳ್ಳಾರಿ, ವಂದನಾರ್ಪಣೆಯನ್ನು ಎನ್.ಜಡೆಯಪ್ಪ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

ಹೊಸ ಪುಸ್ತಕಗಳು ಶೀಘ್ರದಲ್ಲಿಯೇ

http://kannadanet.blogspot.com/2011/02/blog-post_2024.html

Tuesday, January 25, 2011

ನಮ್ಮ ಜನಜೀವನದ ನೈಜ ಚಿತ್ರಣ ನೀಡುವ ಭೋಜರಾಜರ ಕಥೆಗಳು


ಕೊಪ್ಪಳ : ಕಥೆಗಾರ,ಕವಿ,ಲೇಖಕರಾಗಿ ಹೆಸರು ಮಾಡಿರುವ ಭೋಜರಾಜ ಸೊಪ್ಪಿಮಠರ ಕಥೆಗಳು ನಮ್ಮ ಜನಜೀವನಕ್ಕೆ ಹತ್ತಿರವಾಗಿರುವಂತಹವು. ನೆಲದ ಗುಣ ಅವರ ಕತೆಗಳಲ್ಲಿವೆ. ಪಾತ್ರಗಳ ಪೋಷಣೆ,ವಿಶ್ಲೇಷಣೆ ಹಾಗೂ ಭಾಷೆಯ ಬಳಕೆ ಅತ್ಯುತ್ತಮವಾಗಿದೆ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹದ ನಗರದ ಎನ್ ಜಿಓ ಭವನದಲ್ಲಿ ಹಮ್ಮಿಕೊಂಡಿದ್ದ ೩೯ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭೋಜರಾಜ ಕಥೆಗಳ ಕುರಿತು ಮಾತನಾಡಿದರು. ಇದುವರೆಗೆ ೩೦ಕ್ಕೂ ಹೆಚ್ಚು ಕಥೆಗಳನ್ನು ಪ್ರಕಟಿಸಿರುವ , ಹತ್ತಾರು ಲೇಖನ,ಕವನಗಳನ್ನು ಪ್ರಕಟಿಸಿರುವ ಭೋಜರಾಜ ಸೊಪ್ಪಿಮಠರ ಕಥೆಗಳಲ್ಲಿ ನಮ್ಮ ಜನರ ಭವಣೆಗಳನ್ನು, ತಮ್ಮ ಸುತ್ತಮುತ್ತಲ ಜನಜೀವನದ ಬಗೆಗಿನ ವಿಶ್ಲೇಷಣೆ ಚೆನ್ನಾಗಿ ಮೂಡಿ ಬಂದಿದೆ ಎಂದು ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು.
ಇದಕ್ಕೂ ಮೊದಲು ಸಿರಾಜ್ ಬಿಸರಳ್ಳಿ- ಲಹರಿ, ವಿರಣ್ಣ ಹುರಕಡ್ಲಿ-ಆಶಯ,ಡಾ.ಮಹಾಂತೇಶ ಮಲ್ಲನಗೌಡರ- ಹಂಪಿ,ಶಿವಪ್ರಸಾದ ಹಾದಿಮನಿ-ಗವಿಮಠ, ವಾಗೀಶ ಪಾಟೀಲ್- ನಿರೀಕ್ಷೆ,ವಿಠ್ಠಪ್ಪ ಗೋರಂಟ್ಲಿ- ಹುಟ್ಟಲಾರದ ಕವಿತೆ ಕವನಗಳನ್ನು ವಾಚನ ಮಾಡಿದರು. ನಂತರ ಕತೆಗಾರ ಭೋಜರಾಜ ಸೊಪ್ಪಿಮಠ ತಮ್ಮ "ವರ್ಷ ಗರ್ಭ" ಕಥೆಯನ್ನು ವಾಚನ ಮಾಡಿದರು. ಅತ್ಯುತ್ತಮ ಎನ್ನಬಹುದಾದ ರೀತಿಯಲ್ಲಿ ಧ್ವನಿಯ ಏರಿಳಿತಗಳೊಂದಿಗೆ ಕಥಾ ವಾಚನ ಮಾಡಿದ ರೀತಿ ಗಮನ ಸೆಳೆಯುವಂತಿತ್ತು. ನಂತರ ತಮಗೆ ಕಥೆ ಬರೆಯಲು ಪ್ರೇರಣೆ ಸಿಕ್ಕ ತಮ್ಮ ಸುತ್ತಲಿನ ಪರಿಸರದ ಬಗ್ಗೆ ಮತ್ತು ವಾಚನ ಮಾಡುವ ರೀತಿ ಕಲಿಸಿಕೊಟ್ಟ ಶಾಸ್ತ್ರಿಗಳ ಬಗ್ಗೆ ಸೊಪ್ಪಿಮಠ ಮಾತನಾಡಿದರು.
ಕಾರ್‍ಯಕ್ರಮದಲ್ಲಿ ಸಣ್ಣಪ್ಪ ಭಾವಿಹುಡೇದ,ಹನುಮಂತಪ್ಪ ಅಂಡಗಿ, ಯಶವಂತ್ ಮತ್ತಿತರರು ಭಾಗವಹಿಸಿದ್ದರು. ವಂದನಾರ್ಪಣೆಯನ್ನು ಶಿವಪ್ರಸಾದ ಹಾದಿಮನಿ ಮಾಡಿದರು. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

Saturday, January 22, 2011

ಕವಿಸಮಯ ೩೯: ಅತಿಥಿಯಾಗಿ ಭೋಜರಾಜ ಸೊಪ್ಪಿಮಠ

ಈ ವಾರದ ಕವಿಸಮಯದ ಅತಿಥಿಯಾಗಿ ಭೋಜರಾಜ ಸೊಪ್ಪಿಮಠ ಆಗಮಿಸಲಿದ್ದಾರೆ. ಈ ವಾರ ಎನ್ ಜಿ ಓಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಆಸಕ್ತರು ಭಾಗವಹಿಸಲು ಕೋರಲಾಗಿದೆ.

Wednesday, January 19, 2011

ಕನ್ನಡನೆಟ್.ಕಾಂ ಕವಿಸಮೂಹದ ಕೆಲಸ ಪ್ರಶಂಸನೀಯ-ಶೇಖರಗೌಡ ಮಾಲಿಪಾಟೀಲ





ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವ ಈ ವೇದಿಕೆಯು ಎಲ್ಲರಿಗೂ ಮಾದರಿಯಾಗಿದೆ. ಕವಿಸಮಯ ಕೆಲಸ ಪ್ರಶಂಸನೀಯ, ಯಾವುದೇ ಆಡಂಭರವಿಲ್ಲದೇ ಸರಳವಾಗಿ ಎಲ್ಲರೂ ಕಲೆತು ಸಾಹಿತ್ಯಿಕ ಚರ್ಚೆ ನಡೆಸುವುದು, ಕವಿಗೋಷ್ಠಿ,ಕಥಾವಾಚನ ಹಮ್ಮಿಕೊಳ್ಳುತ್ತಿರುವುದರ ಕುರಿತು ಬೇರೆ ಜಿಲ್ಲೆಗಳವರು ಸಹ ಕವಿಸಮಯದ ಬಗ್ಗೆ ಪ್ರಶಂಸೆಯ ಮಾತನಾಡುತ್ತಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಹೇಳಿದರು. ಅವರು ಭಾಗ್ಯನಗರದ ಯೋಗಾಶ್ರಮದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೩೮ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಕಾವ್ಯ ಕಮ್ಮಟ ಹಮ್ಮಿಕೊಂಡು ಯುವ ಕವಿಗಳಿಗೆ, ಕವಿಯತ್ರಿಯರಿಗೆ ಹೆಚ್ಚಿನ ಮಾರ್ಗದರ್ಶನ ನೀಡಲಾಗುವುದು. ಇಂತಹ ಸಾಹಿತ್ಯಿಕ ಚಟುವಟಿಕೆಗಳಿಗೆ ಕಸಾಪ ಯಾವತ್ತೂ ಬೆಂಬಲಿಸುತ್ತದೆ ಎಂದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಎ.ಪಿ.ಅಂಗಡಿ-ಕಾಯಿಲೆ, ಎನ್.ಜಡೆಯಪ್ಪ- ಒಳ ಬರಬೇಡ, ಸರೋಜಾ ಬಾಕಳೆ- ಹಿಂಗ್ಯಾಕೈತಿ, ಡಾ.ಮಹಾಂತೇಶ ಮಲ್ಲನಗೌಡರ-ನಶ್ವರ ನಿಲಯ, ಜಿ.ಎಸ್.ಗೋನಾಳ-ನೆಲೆ,ಬೆಲೆ, ವಿಠ್ಠಪ್ಪ ಗೋರಂಟ್ಲಿ-ಇಂಥವನ್ನೊಬ್ಬ, ನನ್ನವ್ವ, ವೀರಣ್ಣ ಹುರಕಡ್ಲಿ- ಜವರಾಯನ ಅಟ್ಟಹಾಸ,ಹೆಚ.ಎಸ್.ವಾಲ್ಮೀಕಿ- ಬರಲಿರುವ ವರ್ಷಗಳು,ಪ್ರಮೋದ ತುರ್ವಿಹಾಳ- ಮಗು, ಡಾ.ವಿ.ಬಿ.ರಡ್ಡೇರ-ಇವಳು ಪ್ರತಿಭಾ, ಸುಮತಿ ಹಿರೇಮಠ- ಭಾಬ ಬಿಂಬ,ಸಿರಾಜ್ ಬಿಸರಳ್ಳಿ - ಬಿಕ್ಕಳಿಕೆ, ನಟರಾಜ್ ಸವಡಿ-ಬಾಲ್ಯ ಕವನಗಳನ್ನು ವಾಚನ ಮಾಡಿದರು. ನಂತರ ಕಾವ್ಯದ ಕುರಿತು ಚರ್ಚೆ ನಡೆಯಿತು. ಸಿರಾಜ್ ಬಿಸರಳ್ಳಿ ಮಾತನಾಡಿ ಕವಿಸಮೂಹ ತನ್ನ ಮಿತಿಯಲ್ಲಿ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕಸಾಪದಂತಹ ಅಧಿಕೃತ ಸಂಸ್ಥೆಗಳು ಸಾಹಿತ್ಯಿಕ ಚರ್ಚೆಗಳನ್ನು, ಕಥೆ,ಕಾವ್ಯಗಳ ಬಗ್ಗೆ ಕಮ್ಮಟಗಳನ್ನು ಹಮ್ಮಿಕೊಳ್ಳಲಿ ಯುವ ಸಾಹಿತಿಗಳಿಗೆ ಮಾರ್ಗದರ್ಶನ ನೀಡುವಂತಾಗಲಿ ಎಂದರು.
ಕಾರ್‍ಯಕ್ರಮದಲ್ಲಿ ಮಹೇಶ ಬಳ್ಳಾರಿ, ಹನುಮಂತಪ್ಪ ಅಂಡಗಿ, ಶ್ರೀನಿವಾಸ ಚಿತ್ರಗಾರ,ಎಚ್.ಎಸ್.ಉಮರಿ, ಎಂ.ಎಚ್.ವಾಲ್ಮಿಕಿ, ಅನಸೂಯಮ್ಮ ವಾಲ್ಮಿಕಿ, ಕೆ.ಎಂ.ಹುನಗುಂದ , ಮುನೀರ್ ಸಿದ್ದಿಕಿ ಹಾಗೂ ಯೋಗಾಶ್ರಮದ ಸದಸ್ಯರು ಸೇರಿದಂತೆ ಇತರರು ಉಪಸ್ಥಿರಿದ್ದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.